ಯುಎಸ್ ಓಪನ್ : ನಡಾಲ್‌ಗೆ ಸೋಲುಣಿಸಿದ ಲುಕಸ್ ಪೌವಿಲ್ಲೆ
Update: 2016-09-05 10:21 IST
ನ್ಯೂಯಾರ್ಕ್, ಸೆ.5: ಹದಿನಾಲ್ಕು ಬಾರಿ ಗ್ರ‍್ಯಾಂಡ್ ಸ್ಲಾಮ್ ಜಯಿಸಿದ ಸ್ಪೇನ್‌ನ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ‍್ ಫೈನಲ್ ನಲ್ಲಿ ಸೋತು ನಿರ್ಗಮಿಸಿದ್ದಾರೆ.
ರಫೆಲ್ ನಡಾಲ್ ಅವರಿಗೆ ಫ್ರಾನ್ಸ್‌ನ ಯುವ ಆಟಗಾರ ಲುಕಸ್ ಪೌವಿಲ್ಲೇ ಅವರು ಸೋಲುಣಿಸಿ ಕ್ವಾರ್ಟರ‍್ ಫೈನಲ್ ನಲ್ಲಿ ತಲುಪಿದರು.
ರವಿವಾರ ನಾಲ್ಕು ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ಲುಕಸ್ ಪೌವಿಲ್ಲೇ ಅವರು ಎರಡು ಬಾರಿ ಯುಎಸ್ ಓಪನ್ ಜಯಿಸಿದ ನಡಾಲ್‌ರನ್ನು 6-1, 2-6,6-4, 3-6,7-6(6)ಅಂತರದಲ್ಲಿ ಮಣಿಸಿದರು.
2004ರ ಬಳಿಕ ನಡಾಲ್ ಮೊದಲ ಬಾರಿ ಯುಎಸ್ ಓಪನ್‌ನಲ್ಲಿ ಕ್ವಾರ್ಟರ‍್ ಫೈನಲ್ ತಲುಪುವಲ್ಲಿ ಎಡವಿದ್ದಾರೆ.