×
Ad

ರಿಯೋ ಪ್ಯಾರಾಲಿಂಪಿಕ್ಸ್: ಕಿಟ್ ಸಮಸ್ಯೆ ಎದುರಿಸಿದ ಭಾರತದ ಅಥ್ಲೀಟ್‌ಗಳು

Update: 2016-09-07 23:19 IST

 ಹೊಸದಿಲ್ಲಿ, ಸೆ.7: ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬ್ರೆಝಿಲ್‌ಗೆ ತೆರಳಿರುವ ಭಾರತದ ಪ್ಯಾರಾ ಅಥ್ಲೀಟ್‌ಗಳು ಕಿಟ್‌ಗೆ ಸಂಬಂಧಿಸಿ ಸಮಸ್ಯೆಯನ್ನು ಎದುರಿಸಿದ್ದು, ಕೂಡಲೇ ಮಧ್ಯಪ್ರವೇಶಿಸಿದ ಕ್ರೀಡಾ ಸಚಿವಾಲಯ ಸಮಸ್ಯೆಯನ್ನು ಬಗೆಹರಿಸಿ ಬುಧವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆೆ.

 ಅಥ್ಲೀಟ್‌ಗಳ ಅಧಿಕೃತ ಬಣ್ಣದ ಕೋಟುಗಳಲ್ಲಿರುವ ಭಾರತದ ತ್ರಿವರ್ಣ ಧ್ವಜದಲ್ಲಿ ಬಿಳಿ ಬಣ್ಣವಿರಲಿಲ್ಲ ಹಾಗೂ ಜರ್ಸಿಯ ಹಿಂಬದಿ ದೇಶದ ಹೆಸರನ್ನು ಮುದ್ರಿಸಿರಲಿಲ್ಲ. ಇದನ್ನು ಗಮನಿಸಿದ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತದ ಕಿಟ್‌ನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಅಥ್ಲೀಟ್‌ಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಗೊಂದಲ ಎದುರಾಗಿತ್ತು.

ಭಾರತದ ಕಿಟ್‌ನ್ನು ಸರಿಪಡಿಸಿದ ಬಳಿಕ ಐಪಿಸಿ ಇದನ್ನು ಮಾನ್ಯ ಮಾಡಿತು. ಭಾರತದ ಅಥ್ಲೀಟ್‌ಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News