×
Ad

ಮುಂಬೈ ತಂಡಕ್ಕೆ ರೋಹಿತ್ ಶರ್ಮ ಸೇರ್ಪಡೆ

Update: 2016-09-08 13:54 IST

ಮುಂಬೈ, ಸೆ.8: ಪ್ರವಾಸಿ ನ್ಯೂಝಿಲೆಂಡ್ ವಿರುದ್ಧ ಹೊಸದಿಲ್ಲಿಯಲ್ಲಿ ಸೆ.16-18ರ ತನಕ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡಲಿರುವ 15 ಸದಸ್ಯರನ್ನು ಒಳಗೊಂಡ ರಣಜಿ ಚಾಂಪಿಯನ್ ಮುಂಬೈ ತಂಡಕ್ಕೆ ರೋಹಿತ್ ಶರ್ಮ ಸೇರ್ಪಡೆಯಾಗಿದ್ದಾರೆ.

ಇನ್ನೋರ್ವ ಟೆಸ್ಟ್ ಆಟಗಾರ ಅಜಿಂಕ್ಯ ರಹಾನೆ ಮುಂಬೈ ತಂಡದಲ್ಲಿಲ್ಲ. ಅವರ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್ ಆದಿತ್ಯ ತಾರೆ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಎಂಸಿಎ ಜೊತೆ ಕಾರ್ಯದರ್ಶಿ ಹಾಗೂ ಹಿರಿಯರ ಆಯ್ಕೆ ಸಮಿತಿಯ ಸಂಚಾಲಕ ಉನ್ಮೇಶ್ ಖಾನ್ವಿಲ್ಕರ್ ತಿಳಿಸಿದ್ದಾರೆ.

ಇತರ ನಾಲ್ಕು ಪ್ರಮುಖ ಆಟಗಾರರಾದ ಬ್ಯಾಟ್ಸ್‌ಮನ್ ಅಖಿಲ್ ಹೆರ್ವಾಡ್ಕರ್ ಹಾಗೂ ಶ್ರೇಯಸ್ ಐಯ್ಯರ್, ಮಧ್ಯಮ ವೇಗಿಗಳಾದ ಶಾರ್ದೂಲ್ ಠಾಕೂರ್ ಹಾಗೂ ಧವಳ್ ಕುಲಕರ್ಣಿ ತಂಡದಲ್ಲಿಲ್ಲ. ಇವರೆಲ್ಲರೂ ಪ್ರಸ್ತುತ ಭಾರತ ‘ಎ’ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದಾರೆ.

ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಝಿಲೆಂಡ್ ತಂಡ ಭಾರತಕ್ಕೆ ಆಗಮಿಸಲಿದ್ದು, ಈ ತಿಂಗಳಾಂತ್ಯಕ್ಕೆ ಭಾರತ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯು ಸೆ.22 ರಿಂದ ಅಕ್ಟೋಬರ್ 29ರ ತನಕ ನಡೆಯಲಿದೆ.

ಅಭ್ಯಾಸ ಪಂದ್ಯಕ್ಕೆ ಮುಂಬೈ ತಂಡ: ಆದಿತ್ಯ ತಾರೆ(ನಾಯಕ),ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಕೌಸ್ತುಬ್ ಪವಾರ್, ಜೈ ಬಿಶ್ತಾ, ಸುಫಿಯಾನ್ ಶೇಖ್, ಅರ್ಮನ್ ಜಾಫರ್, ಪರೀಕ್ಷಿತ್ ವಲ್ಸಾಂಗಕರ್, ವಿಶಾಲ್ ದಾಭೋಲ್ಕರ್, ವಿಜಯ್ ಗೊಹಿಲ್, ಬಲ್ವಿಂದರ್ ಸಿಂಗ್ ಸಂಧು(ಜೂ.), ತುಷಾರ್ ದೇಶಪಾಂಡೆ, ರೊಸ್ಟಾನ್ ಡಿಯಾಸ್, ಹರ್ಷಲ್ ಸೋನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News