ಭಾರತ-ಕಿವೀಸ್ 3ನೆ ಏಕದಿನ ಮುಂದೂಡಿಕೆ
Update: 2016-09-08 22:45 IST
ಹೊಸದಿಲ್ಲಿ, ಸೆ.8: ‘ಕರ್ವಾ ಚೌತ್‘ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಂದು ನಿಗದಿಯಾಗಿದ್ದ ಭಾರತ ಹಾಗೂ ನ್ಯೂಝಿಲೆಂಡ್‌ನ ನಡುವಿನ ಮೂರನೆ ಏಕದಿನ ಪಂದ್ಯವನ್ನು 20ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಗುರುವಾರ ಬಿಸಿಸಿಐ ಸ್ಪಷ್ಟಪಡಿಸಿದೆ.
ನಮ್ಮ ಕೋರಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಡಿಡಿಸಿಎ ಅಧ್ಯಕ್ಷ ಸಿ.ಕೆ. ಖನ್ನಾ ಹೇಳಿದ್ದಾರೆ.
ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ 3ನೆ ಏಕದಿನ ಪಂದ್ಯವನ್ನು ಒಂದು ದಿನ ಮುಂದೂಡಬೇಕೆಂಬ ನಮ್ಮಕೋರಿಕೆಯನ್ನು ಮನ್ನಿಸಿದ ಬಿಸಿಸಿಐಗೆ ನಾವು ಕೃತಜ್ಞತೆ ಸಲ್ಲಿಸುವೆವು ಎಂದು ಖನ್ನಾ ತಿಳಿಸಿದ್ದಾರೆ.