×
Ad

ನಾಳೆಯಿಂದ ದುಲೀಪ್ ಟ್ರೋಫಿ ಫೈನಲ್

Update: 2016-09-08 23:16 IST

ಹೊಸದಿಲ್ಲಿ, ಸೆ.8: ಗ್ರೇಟರ್ ನೊಯ್ಡದಲ್ಲಿ ಸೆ.10ರಿಂದ 14ರ ತನಕ ನಡೆಯಲಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಆರು ಮಂದಿ ಆಟಗಾರರು ಆಡಲಿದ್ದಾರೆ.
ಚೇತೇಶ್ವರ ಪೂಜಾರ ಇಂಡಿಯಾ ಬ್ಲೂ ತಂಡದಲ್ಲಿ ಆಡುತ್ತಿದ್ದಾರೆ. ಇದೀಗ ಇವರನ್ನು ಹೊರತುಪಡಿಸಿ ಟೆಸ್ಟ್ ತಂಡದ ಐದು ಮಂದಿ ಆಟಗಾರರನ್ನು ಬ್ಲೂ ಮತ್ತು ರೆಡ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಶಿಖರ್ ಧವನ್, ಅಮಿತ್ ಮಿಶ್ರಾ ಮತ್ತು ಸ್ಟುವರ್ಟ್ ಬಿನ್ನಿ ಇಂಡಿಯಾ ರೆಡ್, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜ ಅವರನ್ನು ಬ್ಲೂ ತಂಡಕ್ಕೆ ಆಯ್ಕೆ ಸಮಿತಿಯು ಸೇರಿಸಿಕೊಂಡಿದೆ.
ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಆಧಾರದಲ್ಲಿ ಫೈನಲ್ ತಲುಪಿವೆ.
 ನ್ಯೂಝಿಲೆಂಡ್ ವಿರುದ್ಧ ಸೆಪ್ಟಂಬರ್ 22ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅಭ್ಯಾಸ ನಡೆಸಲು ಟೀಮ್ ಇಂಡಿಯಾದ 6 ಆಟಗಾರರಿಗೆ ಅವಕಾಶ ನೀಡಲಾಗಿದೆ.

ಇಂಡಿಯಾ ರೆಡ್: ಯುವರಾಜ್ ಸಿಂಗ್(ನಾಯಕ), ಅಭಿನವ್ ಮುಕುಂದ್, ಶಿಖರ್ ಧವನ್, ಸುದೀಪ್ ಚಟರ್ಜಿ, ಗುರುಕೀರತ್ ಸಿಂಗ್, ಅಂಕುಶ್ ಬೈನ್ಸ್(ವಿಕೆಟ್ ಕೀಪರ್),ಅಕ್ಷಯ್ ವಾಖರೆ, ಕುಲದೀಪ್ ಯಾದವ್, ಅಮಿತ್ ಮಿಶ್ರಾ, ನಾಥು ಸಿಂಗ್, ಅನುರೀತ್ ಸಿಂಗ್, ಈಶ್ವರ್ ಪಾಂಡೆ, ನಿತೀಶ್ ರಾಣಾ, ಪ್ರದೀಪ್ ಸಾಂಗ್ವಾನ್.
ಇಂಡಿಯಾ ಬ್ಲೂ: ಗೌತಮ್ ಗಂಭೀರ್ (ನಾಯಕ), ಮಾಯಾಂಕ್ ಅಗರ್‌ವಾಲ್, ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ಸಿದ್ದೇಶ್ ಲಾಡ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಪರ್ವೇಝ್ ರಸೂಲ್, ಸೂರ್ಯಕುಮಾರ್ ಯಾದವ್, ಕರಣ್ ಶರ್ಮ, ರವೀಂದ್ರ ಜಡೇಜ, ಮೋಹಿತ್ ಶರ್ಮ, ಪಂಕಜ್ ಸಿಂಗ್, ಅಭಿಮನ್ಯು ಮಿಥುನ್, ಶೆಲ್ಡಾನ್ ಜಾಕ್ಸನ್, ಹನುಮನ್ ವಿಹಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News