ಚತುರ್ದಿನ ಟೆಸ್ಟ್ ಕುತೂಹಲ ಕೆರಳಿಸಿದ ಆಸ್ಟ್ರೇಲಿಯ ‘ಎ’-ಭಾರತ ‘ಎ’ ಪಂದ್ಯ

Update: 2016-09-10 18:05 GMT

ಮೆಲ್ಬೋರ್ನ್, ಸೆ.10: ಆಸ್ಟ್ರೇಲಿಯ ‘ಎ’ ಹಾಗೂ ಭಾರತ ‘ಎ’ ನಡುವೆ ಇಲ್ಲಿ ನಡೆಯುತ್ತಿರುವ ಚತುರ್ದಿನ ಟೆಸ್ಟ್ ಪಂದ್ಯ ರೋಚಕ ಅಂತ್ಯ ಕಾಣುವ ಸಂಭವವಿದೆ. ಮೂರನೆ ದಿನದಾಟ ಮಳೆಯಿಂದಾಗಿ ಬೇಗನೆ ಕೊನೆಗೊಂಡಿದೆ. ಆತಿಥೇಯ ಆಸ್ಟ್ರೇಲಿಯ ಗೆಲುವಿಗೆ 6 ವಿಕೆಟ್‌ಗಳ ನೆರವಿನಿಂದ ಇನ್ನೂ 100 ರನ್ ಗಳಿಸ ಬೇಕಾದ ಅಗತ್ಯವಿದೆ.

ಮೊದಲ ಇನಿಂಗ್ಸ್‌ನಲ್ಲಿ 2 ರನ್ ಮುನ್ನಡೆಯೊಂದಿಗೆ 2ನೆ ಇನಿಂಗ್ಸ್ ಆರಂಭಿಸಿದ ಭಾರತ ಕೇವಲ 156 ರನ್‌ಗೆ ಆಲೌಟಾಯಿತು. ಆಸೀಸ್‌ಗೆ 159 ರನ್ ಗೆಲುವಿನ ಗುರಿ ನೀಡಿತು. ಆಸೀಸ್‌ನ ಪರ ಡೇನಿಯಲ್ ವಾರ್ರಲ್(3-43), ಡೇವಿಡ್ ಮೂಡಿ(3-64) ಹಾಗೂ ಚಾಡ್ ಸಾಯೆರ್ಸ್‌(3-21) ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಬಾಲಂಗೋಚಿ ಜಯಂತ್ ಯಾದವ್(46) ಅಗ್ರ ಸ್ಕೋರರ್ ಎನಿಸಿಕೊಂಡರು.

ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ‘ಎ’ ತಂಡ 4 ವಿಕೆಟ್‌ಗಳ ನಷ್ಟಕ್ಕೆ 59 ರನ್ ಗಳಿಸಿದೆ. ಸತತ 2 ಎಸೆತಗಳಲ್ಲಿ 2 ವಿಕೆಟ್ ಉಡಾಯಿಸಿದ ಶಾರ್ದೂಲ್ ಠಾಕೂರ್ ಆಸೀಸ್‌ಗೆ ಆರಂಭದಲ್ಲೆ ಆಘಾತ ನೀಡಿದರು. ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್(16) ಹಾಗೂ ಬಿಯು ವೆಬ್‌ಸ್ಟರ್(6) ಕ್ರೀಸ್ ಕಾಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News