ಕಿವೀಸ್‌ಗೆ ಅಶ್ವಿನ್ ಸವಾಲಾಗಲಿದ್ದಾರೆ: ಮೈಕ್ ಹೆಸ್ಸನ್
ಚೆನ್ನೈ, ಸೆ.11: ‘‘ಭಾರತ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳಿಗೆ ರವಿಚಂದ್ರನ್ ಅಶ್ವಿನ್ ಬೆದರಿಕೆಯಾಗಿ ಪರಿಣಮಿಸಲಿದ್ದಾರೆ. ನಾವು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದ್ದೇವೆ’’ಎಂದು ನ್ಯೂಝಿಲೆಂಡ್ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ತಂಡದಲ್ಲಿರುವ ತ್ರಿವಳಿ ಸ್ಪಿನ್ನರ್‌ಗಳಾದ ಮಾರ್ಕ್ ಕ್ರೆಗ್, ಐಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ಪ್ರದರ್ಶನದ ಬಗ್ಗೆ ತೃಪ್ತಿವ್ಯಕ್ತಪಡಿಸಿದ ಮೈಕ್,‘‘ ನಮ್ಮ ತಂಡದಲ್ಲಿರುವ ಯುವ ಸ್ಪಿನ್ನರ್‌ಗಳ ಬಳಗ ಭಾರತ ವಿರುದ್ಧ ನಿರ್ಣಾಯಕ ಪಾತ್ರವಹಿಸುವ ವಿಶ್ವಾಸವಿದೆ ಎಂದು ಹೇಳಿದರು.
ನ್ಯೂಝಿಲೆಂಡ್ ತಂಡ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೊದಲು ಸೆ.16 ಹಾಗೂ 18ರ ನಡುವೆ ದಿಲ್ಲಿಯಲ್ಲಿ ತ್ರಿದಿನ ಅಭ್ಯಾಸ ಪಂದ್ಯವನ್ನು ಆಡುತ್ತದೆ. ಎರಡನೆ ಹಾಗೂ ಮೂರನೆ ಟೆಸ್ಟ್ ಪಂದ್ಯ ಕ್ರಮವಾಗಿ ಸೆ.30 ಹಾಗೂ ಅ.8 ರಂದು ಕೋಲ್ಕತಾ ಹಾಗು ಇಂದೋರ್‌ನಲ್ಲಿ ನಡೆಯುವುದು.
ಮಾರ್ಟಿನ್ ಗಪ್ಟಿಲ್ ಹಾಗೂ ಟಾಮ್ ಲಾಥಂ ನ್ಯೂಝಿಲೆಂಡ್‌ನ ಇನಿಂಗ್ಸ್ ಆರಂಭಿಸಲಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲೂಕ್ ರಾಂಚಿ ಅಂತಿಮ 11ರ ಬಳಗದಲ್ಲ ಸ್ಪರ್ಧೆಯಲ್ಲಿದ್ದಾರೆ ಎಂದು ಹೆಸ್ಸನ್ ತಿಳಿಸಿದ್ದಾರೆ.