×
Ad

ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿ: ಟೀಮ್ ಇಂಡಿಯಾ ಪ್ರಕಟ

Update: 2016-09-12 13:33 IST

 ಮುಂಬೈ, ಸೆ.12: ನ್ಯೂಝಿಲೆಂಡ್ ವಿರುದ್ಧ ಸೆ.22 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಸೋಮವಾರ ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ಹೊಸ ವೇಗದ ಬೌಲರ್ ಶಾರ್ದೂಲ್ ಠಾಕೂರ್‌ರನ್ನು ಕೈಬಿಡಲಾಗಿದೆ.

ಬಿನ್ನಿ ಹಾಗೂ ಠಾಕೂರ್ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾಗಿದ್ದ 17 ಸದಸ್ಯರ ತಂಡದಲ್ಲಿದ್ದರು. ಇದೀಗ ಆಯ್ಕೆಗಾರರು ಈ ಇಬ್ಬರನ್ನು ಕೈಬಿಟ್ಟು 15 ಸದಸ್ಯರ ತಂಡವನ್ನು ಕಿವೀಸ್ ವಿರುದ್ಧದ ಸ್ವದೇಶಿ ಸರಣಿಗೆ ಆಯ್ಕೆ ಮಾಡಿದ್ದಾರೆ.

ಸೋಮವಾರ ನಡೆದ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಉಪಸ್ಥಿತರಿದ್ದರು. ಕಳೆದ 11 ಇನಿಂಗ್ಸ್‌ಗಳಲ್ಲಿ ಕೇವಲ 1 ಅರ್ಧಶತಕ ಬಾರಿಸಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಸ್ಥಾನ ಉಳಿಸಿಕೊಂಡಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗೌತಮ್ ಗಂಭೀರ್ ಹಾಗೂ ಭಾರತ ‘ಎ’ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಮನೀಷ್ ಪಾಂಡೆ ಅವರು ಸಂದೀಪ್ ಪಾಟೀಲ್ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮನ ಗೆಲ್ಲಲು ವಿಫಲರಾದರು. ರೋಹಿತ್ ಶರ್ಮರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿಲ್ಲ.

ಭಾರತದ ಟೆಸ್ಟ್ ತಂಡ:

ವಿರಾಟ್ ಕೊಹ್ಲಿ(ನಾಯಕ), ಆರ್.ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್.ರಾಹುಲ್, ವೃದ್ದಿಮಾನ್ ಸಹಾ(ವಿಕೆಟ್‌ಕೀಪರ್), ಇಶಾಂತ್ ಶರ್ಮ, ರೋಹಿತ್ ಶರ್ಮ, ಮುರಳಿ ವಿಜಯ್, ಉಮೇಶ್ ಯಾದವ್ ಹಾಗೂ ಮುಹಮ್ಮದ್ ಶಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News