×
Ad

ಇಂಡಿಯಾ ಬ್ಲೂಗೆ ದುಲೀಪ್ ಟ್ರೋಫಿ

Update: 2016-09-14 23:48 IST

ಗ್ರೇಟರ್‌ನೊಯ್ಡ, ಸೆ.14: ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಬ್ಲೂ ತಂಡ 2016ರ ಸಾಲಿನ ದುಲೀಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

 ರವೀಂದ್ರ ಜಡೇಜ(5-76) ಹಾಗೂ ಕರಣ್ ಶರ್ಮ(3-33) ದಾಳಿಗೆ ನಲುಗಿದ ಇಂಡಿಯಾ ರೆಡ್ ತಂಡ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂಡಿಯಾ ಬ್ಲೂ ತಂಡದ ವಿರುದ್ಧ 355 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲುಂಡಿತು.

ಗೆಲ್ಲಲು 517 ರನ್ ಕಠಿಣ ಗುರಿ ಪಡೆದ ರೆಡ್ ತಂಡ 44.1 ಓವರ್‌ಗಳಲ್ಲಿ ಕೇವಲ 161 ರನ್‌ಗೆ ಆಲೌಟಾಗಿ ಸುಲಭವಾಗಿ ಸೋಲೊಪ್ಪಿಕೊಂಡಿತು. ಐದನೆ ದಿನವಾದ ಬುಧವಾರ 3 ವಿಕೆಟ್‌ಗೆ 139 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಡಿಯಾ ರೆಡ್ ಪರ ಗುರುಕೀರತ್ ಸಿಂಗ್(39 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಶಿಖರ್ ಧವನ್(29), ಕುಲ್‌ದೀಪ್ ಯಾದವ್(ಔಟಾಗದೆ 24), ನಾಯಕ ಯುವರಾಜ್ ಸಿಂಗ್(21) ಹಾಗೂ ಬೈನ್ಸ್(20) ಮಾತ್ರ ಎರಂಡಂಕೆಯ ಸ್ಕೋರ್ ದಾಖಲಿಸಿದರು.

 ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 256 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಔಟಾಗದೆ ದ್ವಿಶತಕ ಬಾರಿಸಿದ ಪೂಜಾರ ಹಾಗೂ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ರವೀಂದ್ರ ಜಡೇಜ ಈ ತಿಂಗಳಾಂತ್ಯದಲ್ಲಿ ಸ್ವದೇಶದಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಶಿಖರ್ ಧವನ್(58 ರನ್) ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ(3 ವಿಕೆಟ್) ಭಾರೀ ನಿರಾಸೆಗೊಳಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಡಿಯಾ ಬ್ಲೂ: ಮೊದಲ ಇನಿಂಗ್ಸ್: 693/6 ಡಿಕ್ಲೇರ್ ಎರಡನೆ ಇನಿಂಗ್ಸ್: 45 ಓವರ್‌ಗಳಲ್ಲಿ 179/5 ಡಿಕ್ಲೇರ್

ಇಂಡಿಯಾ ರೆಡ್: ಮೊದಲ ಇನಿಂಗ್ಸ್: 356 ರನ್

ಎರಡನೆ ಇನಿಂಗ್ಸ್: 161ರನ್‌ಗೆ ಆಲೌಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News