×
Ad

ಯುಇಎಫ್‌ಎ ನೂತನ ಅಧ್ಯಕ್ಷರಾಗಿ ಸ್ಲೋವಾನಿಯ ವಕೀಲ ಅಲೆಕ್ಸಾಂಡರ್

Update: 2016-09-14 23:50 IST

  ಅಥೆನ್ಸ್(ಗ್ರೀಸ್), ಸೆ.14: ಯುಇಎಫ್‌ಎ ನೂತನ ಅಧ್ಯಕ್ಷರಾಗಿ ಸ್ಲೋವಾನಿಯ ವಕೀಲ ಅಲೆಕ್ಸಾಂಡರ್ ಸೆಫೆರಿನ್ ಬುಧವಾರ ಆಯ್ಕೆಯಾಗಿದ್ದಾರೆ. ಅಲೆಕ್ಸಾಂಡರ್ ಫ್ರಾನ್ಸ್‌ನ ಮೈಕಲ್ ಪ್ಲಾಟಿನಿಯ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ.

48ರ ಪ್ರಾಯದ ಅಲೆಕ್ಸಾಂಡರ್ ಅವರು ಪ್ಲಾಟಿನಿಯ ಬದಲಿಗರಾಗಿ 2019ರ ತನಕ ಅಧಿಕಾರದಲ್ಲಿರುತ್ತಾರೆ. ಫ್ರಾನ್ಸ್‌ನ ಮಾಜಿ ನಾಯಕ ಪ್ಲಾಟಿನಿ ಹಣಕಾಸು ಅವ್ಯವಹಾರ ಆರೋಪದಲ್ಲಿ ಫಿಫಾದಿಂದ ನಾಲ್ಕು ವರ್ಷಗಳ ಕಾಲ ನಿಷೇಧದ ಶಿಕ್ಷೆ ಎದುರಿಸುತ್ತಿದ್ದಾರೆ.

 ಸ್ಲೋವಾನಿಯ ಫೆಡರೇಶನ್ ಮುಖ್ಯಸ್ಥರಾಗಿರುವ ಅಲೆಕ್ಸಾಂಡರ್ ಅಥೆನ್ಸ್‌ನಲ್ಲಿ ಯುಇಎಫ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲೆಂಡ್‌ನ ಮೈಕಲ್ ವ್ಯಾನ್ ಪ್ರಾಗ್‌ರನ್ನು 42-13 ಮತಗಳ ಅಂತರದಿಂದ ಸೋಲಿಸಿದರು.

62 ವರ್ಷಗಳ ಇತಿಹಾಸವಿರುವ ಯುಇಎಫ್‌ಎಗೆ ಅಲೆಕ್ಸಾಂಡರ್ 62ನೆ ಅಧ್ಯಕ್ಷರಾಗಿದ್ದಾರೆ.

‘‘ನನ್ನ ಚಿಕ್ಕ ಹಾಗೂ ಸುಂದರವಾದ ದೇಶ ಸ್ಲೋವಾನಿಯ ಈಗ ತುಂಬಾ ಹೆಮ್ಮೆ ಪಡುತ್ತಿದೆ. ನಾವು ಕೂಡ ಒಂದು ದಿನ ಹೆಮ್ಮೆ ಪಡುತ್ತೇವೆ ಎಂಬ ವಿಶ್ವಾಸವಿತ್ತು’’ ಎಂದು ಯುಇಎಫ್‌ಎ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಲೆಕ್ಸಾಂಡರ್ ಯುಇಎಫ್ ನಿಯೋಗವನ್ನು ಉದ್ದೇಶಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News