ಮಂಗಳೂರು ವಿರುದ್ಧ ಮೈಸೂರಿಗೆ ಜಯ
ಹುಬ್ಬಳ್ಳಿ, ಸೆ.17: ಮೈಸೂರುವಾರಿಯರ್ಸ್ ತಂಡ ಐದನೆ ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಎರಡನೆ ಪಂದ್ಯದಲ್ಲಿ ಮೈಸೂರುವಾರಿಯರ್ಸ್ ವಿರುದ್ಧ ಏಳುವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.
ರಾಜ್‌ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡದ ಪಂದ್ಯದಲ್ಲಿ ಗೆಲುವಿಗೆ 149 ರನ್‌ಗಳ ಸವಾಲನ್ನು ಪಡೆದಮೈಸೂರುವಾರಿಯರ್ಸ್ ಇನ್ನೂ 17 ಎಸೆತಗಳು ಬಾಕಿ ಉಳಿದಿರುವಾಗಲೇ 3 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಮೈಸೂರು ತಂಡದ ಆರಂಭಿಕ ದಾಂಡಿಗರಾದ ರಾಜು ಭಟ್ಕಳ್ 48 ರನ್(29ಎ, 9ಬೌ,1ಸಿ), ಅರ್ಜುನ್ ಹೊಯ್ಸಳ 22 ರನ್(32ಎ, 2ಬೌ), ಕೃಷ್ಣಪ್ಪ ಗೌತಮ್ 36 ರನ್(20ಎ, 1ಬೌ,4ಸಿ), ಆರ್. ಜೋನಾಥನ್ ಔಟಾಗದೆ 21 ರನ್ ಮತ್ತು ಪ್ರತೀಕ್ಷಾ 13 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮಂಗಳೂರು ಯುನೈಟೆಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು. ನಾಯಕ ಮತ್ತು ವಿಕೆಟ್ ಕೀಪರ್ ಸಿ.ಎಂ. ಗೌತಮ್ 64 ರನ್(55ಎ, 6ಬೌ,2ಸಿ) ಮತ್ತು ನಿಧೀಶ್ ಎಂ 54 ರನ್(40ಎ, 1ಬೌ, 4ಸಿ) ಇವರನ್ನು ಹೊರತುಪಡಿಸಿದರೆ ತಂಡದ ಇತರ ಯಾರೂ ಎರಡಂಕೆಯ ಸ್ಕೋರ್ ದಾಖಲಿಸಲಿಲ್ಲ.
ಎಬಿ ಸಾಗರ್(27ಕ್ಕೆ 2), ವಿವಿ ಕುಮಾರ್ (31ಕ್ಕೆ 2), ರಾಜು ಭಟ್ಕಳ್(4ಕ್ಕೆ 1) ಮತ್ತು ಜೆ.ಸುಚಿತ್(24ಕ್ಕೆ1) ದಾಳಿಯ ಮುಂದೆ ರನ್ ಗಳಿಸಲು ಮಂಗಳೂರು ತಂಡದ ಆಟಗಾರರು ಪರದಾಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಮಂಗಳೂರು ಯುನೈಟೆಡ್ 20 ಓವರ್‌ಗಳಲ್ಲಿ 148/7( ಗೌತಮ್ 64, ನಿದೀಶ್ 54; ಸಾಗರ್ 27ಕ್ಕೆ 2, ವೈಶಾಕ್ ವಿಜಯ್ ಕುಮಾರ್ 31ಕ್ಕೆ 2).
ಮೈಸೂರುವಾರಿಯರ್ಸ್ 17.1 ಓವರ್‌ಗಳಲ್ಲಿ 149/3(ರಾಜು ಭಟ್ಕಳ್ 48, ಕೆ.ಗೌತಮ್ 36; ಭರತ್ ಎಂ.ಪಿ. 20ಕ್ಕೆ 1).
ಪಂದ್ಯಶ್ರೇಷ್ಠ: ರಾಜು ಭಟ್ಕಳ್.