ದುಲೀಪ್ ಟ್ರೋಫಿ ಮಹತ್ವದ ಟೂರ್ನಿಯಾಗಿತ್ತು: ಪೂಜಾರ

Update: 2016-09-19 17:57 GMT

ಕಾನ್ಪುರ, ಸೆ.19: ದುಲೀಪ್ ಟ್ರೋಫಿಯಲ್ಲಿ ಗಳಿಸಿದ ರನ್ ನ್ಯೂಝಿಲೆಂಡ್ ವಿರುದ್ಧ ಗುರುವಾರ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಆತ್ಮವಿಶ್ವಾಸವನ್ನು ತುಂಬಿದೆ ಎಂದು ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ಪೂಜಾರ ಕಳೆದ ತಿಂಗಳು ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ರನ್ ಬರ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೂರನೆ ಟೆಸ್ಟ್‌ನಲ್ಲಿ ಆಡುವ 11ರ ಬಳಗದಿಂದ ಹೊರಗುಳಿದಿದ್ದರು. ಪೂಜಾರ ಕಳೆದ ವರ್ಷ ಆಗಸ್ಟ್‌ನಿಂದ ಟೆಸ್ಟ್‌ನಲ್ಲಿ ಶತಕವನ್ನು ಬಾರಿಸಿಲ್ಲ. ಆದರೆ, ಈ ಕುರಿತು ಅವರು ತಲೆಕೆಡಿಸಿಕೊಂಡಿಲ್ಲ.

ಕಿವೀಸ್ ವಿರುದ್ಧ ಕಾನ್ಪುರದಲ್ಲಿ ಗುರುವಾರ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಯಾವ 11 ಆಟಗಾರರನ್ನು ಕಣಕ್ಕಿಳಿಸಲಿದೆ ಎಂದು ಕಾದುನೋಡಬೇಕಾಗಿದೆ. ದುಲೀಪ್ ಟ್ರೋಫಿಯಲ್ಲಿ ಎರಡು ಮ್ಯಾರಥಾನ್ ಇನಿಂಗ್ಸ್‌ನಲ್ಲಿ 166 ಹಾಗೂ ಔಟಾಗದೆ 256 ರನ್ ಗಳಿಸಿರುವ ಪೂಜಾರ ಟೆಸ್ಟ್ ಸರಣಿಗೆ ಉತ್ತಮ ತಯಾರಿ ನಡೆಸಿದ್ದರು.

ದುಲೀಪ್ ಟ್ರೋಫಿಯಲ್ಲಿ ಸಿಡಿಸಿದ ದ್ವಿಶತಕ ಟೆಸ್ಟ್ ಸರಣಿಗೆ ಮೊದಲು ನನಗೆ ಅಗತ್ಯವಾಗಿ ಬೇಕಾಗಿದ್ದ ಇನಿಂಗ್ಸ್ ಆಗಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿ ನಾನು ಗಳಿಸಿದ್ದ 166 ರನ್ ಟರ್ನಿಂಗ್ ಪಾಯಿಂಟ್ ಆಗಿತ್ತು. ಆ ಇನಿಂಗ್ಸ್ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಎಂದು ಬಿಸಿಸಿಐಡಾಟ್ ಟಿವಿಗೆ ಪೂಜಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News