×
Ad

ಈ ಬೌಲರ್ 140ಕಿಮೀ ವೇಗದಲ್ಲಿ ಬೌಲ್ ಮಾಡುತ್ತಾನೆ. ಎರಡೂ ಕೈಗಳಲ್ಲಿ !

Update: 2016-09-21 00:15 IST

 ಕರಾಚಿ, ಸೆ.20: ಹೆಸರು ಯಾಸಿರ್ ಜಾನ್. ಪಾಕಿಸ್ತಾನದ ಯುವ ವೇಗದ ಬೌಲರ್. ಎರಡೂ ಕೈಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಹದಿನೇಳರ ಹರೆಯದ ಯಾಸಿರ್ ಜಾನ್ 140-145 ಕಿಮೀ ವೇಗದಲ್ಲಿ ಬೌಲಿಂಗ್ ನಡೆಸುತ್ತಾರೆ.
ಪಾಕಿಸ್ತಾನದಲ್ಲಿ ವೇಗದ ಬೌಲರ್‌ಗಳಿಗೆ ಬರವಿಲ್ಲ. ಹೊಸ ಹೊಸ ಬೌಲರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಕೀಬ್ ಜಾವೇದ್ ಯುಎಇ ಕೋಚ್ ಆಗಿದ್ದಾಗ ಪ್ರತಿಭಾವಂತ ಬೌಲರ್‌ ಯಾಸಿರ್ ಜಾನ್ ಅವರನ್ನು ಗುರುತಿಸಿದ್ದರು.
ಯುಎಇಯಿಂದ ಪಾಕಿಸ್ತಾನಕ್ಕೆ ಆಗಮಿಸಿದ ಅಕೀಬ್ ಜಾವೇದ್ ಅವರು ಲಾಹೋರ್ ಕ್ಯಿಲಾಂಡರ್ಸ್‌ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಯಾಸಿರ್ ಜಾನ್ ಅವರು ಅಕೀಬ್ ಜಾವೇದ್ ಮಾರ್ಗದರ್ಶನದಲ್ಲಿ ಓರ್ವ ಉತ್ತಮ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ.
ಕಳೆದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಯಾಸಿರ್ ಪಾಲ್ಗೊಂಡಿದ್ದರು. ಇದೀಗ ಅವರು ಎರಡೂ ಕೈಗಳಲ್ಲಿ ಬೌಲಿಂಗ್ ನಡೆಸುವ ಬೌಲರ್ ಆಗಿ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News