×
Ad

ಸಾನಿಯಾ-ಸ್ಟ್ರಿಕೋವಾ ಕ್ವಾರ್ಟರ್ ಫೈನಲ್‌ಗೆ

Update: 2016-09-21 12:05 IST

ಟೋಕಿಯೊ, ಸೆ.21: ಸಾನಿಯಾ ಮಿರ್ಝಾ ಹಾಗೂ ಬಾರ್ಬೊರ ಸ್ಟ್ರಿಕೋವಾ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋ-ಝೆಕ್ ಜೋಡಿ ಸಾನಿಯಾ-ಸ್ಟ್ರಿಕೋವಾ ಜಪಾನ್‌ನ ಕುರುಮಿ ನಾರಾ ಹಾಗೂ ಮಿಸಾಕಿ ಡೊ ಅವರನ್ನು 6-7(3), 7-5, 10-8 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಎರಡು ಗಂಟೆ, 2 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸುತ್ತಿನಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು. ಇಂಡೋ-ಝೆಕ್ ಜೋಡಿ 48 ನಿಮಿಷಗಳಲ್ಲಿ ಟೈ-ಬ್ರೇಕರ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

ಎರಡನೆ ಸೆಟ್‌ನ್ನು 56 ನಿಮಿಷಗಳಲ್ಲಿ 7-5 ಅಂತರದಿಂದ ಗೆದ್ದುಕೊಂಡ ಸಾನಿಯಾ-ಸ್ಟ್ರಿಕೋವಾ ಮೂರನೆ ಹಾಗೂ ನಿರ್ಣಾಯಕ ಸೆಟ್‌ನ್ನು ಕೇವಲ 18 ನಿಮಿಷಗಳಲ್ಲಿ 10-8 ಅಂತರದಿಂದ ಗೆದ್ದುಕೊಂಡರು.

ಸಾನಿಯಾ ಹಾಗೂ ಸ್ಟ್ರಿಕೋವಾ ಮುಂದಿನ ಸುತ್ತಿನಲ್ಲಿ ಚೀನಾದ ಯಿಫಾನ್ ಕ್ಸೂ ಹಾಗೂ ಜಪಾನ್‌ನ ಮಿಯು ಕಾಟೊರನ್ನು ಎದುರಿಸಲಿದ್ದಾರೆ. ಸಾನಿಯಾ-ಸ್ಟ್ರಿಕೋವಾ ಜೋಡಿ ಇತ್ತೀಚೆಗೆ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News