×
Ad

ಜಯರಾಮ್, ಪ್ರಣಯ್, ಶ್ರೀಕಾಂತ್ 2ನೆ ರೌಂಡ್‌ಗೆ

Update: 2016-09-21 23:51 IST

ಟೋಕಿಯೊ, ಸೆ.21: ಅಜಯ್ ಜಯರಾಮ್, ಎಚ್‌ಎಸ್ ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ಜಪಾನ್ ಸೂಪರ್ ಸರಣಿಯಲ್ಲಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

 ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜಯರಾಮ್ ಇಂಡೋನೇಷ್ಯದ ಸೋನಿ ಕುಂಕೊರೊರನ್ನು ಕೇವಲ 46 ನಿಮಿಷಗಳಲ್ಲಿ 21-19, 23-21 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ 2013ರ ಹಾಂಕಾಂಗ್ ಓಪನ್ ಟೂರ್ನಿಯ ಸೋಲಿಗೆ ಸೇಡು ತೀರಿಸಿಕೊಂಡರು.

ದಿನದ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ ಮಲೇಷ್ಯಾದ ಇಸ್ಕಂದರ್ ಝುಲ್ಕರ್‌ನೈನ್ ಝೈನುದ್ದೀನ್‌ರನ್ನು 23-21, 19-21, 21-18 ಗೇಮ್‌ಗಅಂತರದಿಂದ ಸೋಲಿಸಿದ್ದಾರೆ.

  ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ವಿಶ್ವದ ನಂ.13ನೆ ಆಟಗಾರ ಶ್ರೀಕಾಂತ್ ಸಹ ಆಟಗಾರ ಪಿ.ಕಶ್ಯಪ್‌ರನ್ನು 14-21, 21-14, 23-21 ಗೇಮ್‌ಗಳ ಅಂತರದಿಂದ ಸೋಲಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಕಶ್ಯಪ್ ಈ ವರ್ಷ ಆಡಿದ ಎರಡನೆ ಮುಖ್ಯ ಟೂರ್ನಮೆಂಟ್ ಇದಾಗಿದೆ.

 ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಜಯರಾಮ್‌ರನ್ನು ಎದುರಿಸಲಿದ್ದಾರೆ. ಜುಲೈನಲ್ಲಿ ಕೆನಡಾ ಓಪನ್ ಪ್ರಶಸ್ತಿ ಜಯಿಸಿದ್ದ ಬಿ.ಸಾಯಿ ಪ್ರಣೀತ್ ಹಾಂಕಾಂಗ್‌ನ ಕಾ ಲಾಂಗ್ ಆ್ಯಂಗಸ್‌ರನ್ನು 21-9, 21-23, 10-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News