ಐನೂರನೆ ಟೆಸ್ಟ್;ಕೊಹ್ಲಿ ಪಡೆಯ ಬ್ಯಾಟಿಂಗ್‌ಗೆ ಬಟ್ಲರ್ ,ಸ್ಟೈನರ್ ಕಡಿವಾಣ
ನಾಗ್ಪುರ, ಸೆ.22: ಭಾರತದ ಐನೂರನೆ ಟೆಸ್ಟ್ ಎನಿಸಿಕೊಂಡಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನ ಭಾರತದ ಬ್ಯಾಟಿಂಗ್ ಟ್ರೆಂಟ್ ಬೌಲ್ಟ್ ಮತ್ತು ಸ್ಯಾಂಟ್ನರ್ ದಾಳಿಗೆ ಸೊರಗಿದ್ದು, ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿದೆ.
ಇಲ್ಲಿನ ಗ್ರೀನ್‌ಪಾರ್ಕ್‌ನಲ್ಲಿ ಆರಂಭಗೊಂಡ ಟೆಸ್ಟ್‌ನಲ್ಲಿ ಆಟ ನಿಂತಾಗ ಆಲ್‌ರೌಂಡರ್ ರವೀಂದ್ರ ಜಡೇಜ 16ರನ್ ಮತ್ತು ಉಮೇಶ್ ಯಾದವ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ದೊಡ್ಡ ಮೊತ್ತದ ಸವಾಲು ದಾಖಲಿಸುವ ಉದ್ದೇಶದೊಂದಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಅಗ್ರ ಸರದಿಯ ದಾಂಡಿಗರು ಉತ್ತಮ ಆರಂಭ ಒದಗಿಸಿದ್ದರು.
1 ವಿಕೆಟ್ ನಷ್ಟದಲ್ಲಿ 154 ರನ್ ದಾಖಲಿಸಿ ಸುಭದ್ರ ಸ್ಥಿತಿಯಲ್ಲಿದ್ದ ಭಾರತದ ಬ್ಯಾಟಿಂಗ್ ದಿಢೀರನೆ ಕುಸಿತಕ್ಕೊಳಗಾಯಿತು. ನ್ಯೂಝಿಲೆಂಡ್‌ನ ಐದು ಮಂದಿ ಬೌಲರ್‌ಗಳ ದಾಳಿ ಪರಿಣಾಮ ಬೀರಿತು.
ನ್ಯೂಝಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಎಡಗೈ ಸ್ಪಿನ್ನರ್ ಮತ್ತು ಲೆಗ್ ಸ್ಪಿನ್ನರನ್ನು ಇಳಿಸಿ ಭಾರತದ ದಾಂಡಿಗರನ್ನು ಗೊಂದಲಕ್ಕೆ ಸಿಲುಕಿಸಿ , ಆಘಾತ ನೀಡಿದರು.
10.6ನೆ ಓವರ್‌ನನಲ್ಲಿ ಆರಂಭಿಕ ದಾಂಡಿಗ ಕೆ.ಎಲ್ ರಾಹುಲ್ ಅವರು ಎಸೆತವನ್ನು ಕೆಣಕಲು ಹೋಗಿ ವಿಕೆಟ್ ಕೀಪರ್ ವಾಟ್ಲಿಂಗ್‌ಗೆ ಕ್ಯಾಚ್ ನೀಡಿದರು. ರಾಹುಲ್ 39 ಎಸೆತಗಳನ್ನು ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು.
ಆರಂಭಿಕ ದಾಂಡಿಗ ಮುರಳಿ ವಿಜಯ್‌ಗೆ ಚೇತೇಶ್ವರ ಪೂಜಾರ ಜೊತೆಯಾದರು. ಇವರು ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ತಂಡದ ಸ್ಕೋರ್ ನಿಧಾನವಾಗಿ ಏರಿತು. 48.4ನೆ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಯಾಂಟ್ನರ್ ಯಶಸ್ವಿಯಾದರು. ಪೂಜಾರ 62 ರನ್(109ಎ, 8ಬೌ) ಗಳಿಸಿದರು.
ನಾಯಕ ವಿರಾಟ್ ಕೊಹ್ಲಿ ಮಿಂಚಲಿಲ್ಲ(9) ಬೇಗನೆ ಔಟಾದರು. ವ್ಯಾಗ್ನರ್ ಅವರು ಕೊಹ್ಲಿಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ.
ಅರ್ಧಶತಕ ದಾಖಲಿಸಿದ್ದ ಮುರಳಿ ವಿಜಯ್ ಅವರು 58.1ನೆ ಓವರ್‌ನಲ್ಲಿ ಐಶ್ ಸೋಧಿ ಎಸೆತದಲ್ಲಿ ವಾಟ್ಲಿಂಗ್‌ಗೆ ಕ್ಯಾಚ್ ನೀಡಿದರು. ಚಹಾ ವಿರಾಮದ ಹೊತ್ತಿಗೆ ಭಾರತದ ನಾಲ್ಕು ವಿಕೆಟ್‌ಗಳು ಪತನಗೊಂಡಿತ್ತು. ಬಳಿಕ ತಂಡದ ಬ್ಯಾಟಿಂಗ್ ದುರ್ಬಲಗೊಂಡಿತು.
185ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ಬಳಿಕ ಈ ಮೊತ್ತಕ್ಕೆ 82 ರನ್ ಸೇರಿಸುವ ಹೊತ್ತಿಗೆ ಮತ್ತೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಜಿಂಕ್ಯ ರಹಾನೆ 18 ರನ್ ಗಳಿಸಿ ಔಟಾದರು. ಆಗ ತಂಡದ ಸ್ಕೋರ್ ಇನ್ನೂರರ ಗಡಿ ದಾಟಿತ್ತು.
ರೋಹಿತ್ ಶರ್ಮ ಮತ್ತು ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಆರನೆ ವಿಕೆಟ್‌ಗೆ 52 ರನ್ ಸೇರಿಸಿದರು. ರೋಹಿತ್ ಶರ್ಮ 35 ರನ್ ಗಳಿಸಿ ಪೆವಿಲಿಯನ್ ಸೇರಿದರು. ವೃದ್ಧಿಮಾನ್ ಸಹಾ ಖಾತೆ ತೆರೆಯದೆ ವಾಪಸಾದರು. ಆರ್.ಅಶ್ವಿನ್ 40 ರನ್(76ಎ,7ಬೌ) ಗಳಿಸಿದರು. ಮುಹಮ್ಮದ್ ಶಮಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ನ್ಯೂಝಿಲೆಂಡ್‌ನ ಟ್ರೆಂಟ್ ಬೌಲ್ಟ್ 57ಕ್ಕೆ 3, ಮಿಚೆಲ್ ಸ್ಯಾಂಟ್ನರ್ 77ಕ್ಕೆ 3ವಿಕೆಟ್, ವ್ಯಾಗ್ನೆರ್ , ಕ್ರೆಗ್ ಮತ್ತು ಐಶ್ ಸೋಧಿ ತಲಾ 1 ವಿಕೆಟ್ ಹಂಚಿಕೊಂಡರು.