×
Ad

ಪ್ಯಾರಾಥ್ಲೀಟ್‌ರನ್ನು ಭೇಟಿಯಾದ ಪ್ರಧಾನಿ

Update: 2016-09-22 23:37 IST

ಹೊಸದಿಲ್ಲಿ, ಸೆ.22: ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಪದಕ ವಿಜೇತ ನಾಲ್ವರು ಅಥ್ಲೀಟ್‌ಗಳು ಸೇರಿದಂತೆ ಗೇಮ್ಸ್‌ನಲ್ಲಿ ಭಾಗವಹಿಸಿದ ಪ್ಯಾರಾಥ್ಲೀಟ್‌ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿದರು. ತಮ್ಮ ಸಾಧನೆಯ ಮೂಲಕ ದೇಶಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್‌ಗಳನ್ನು ಶ್ಲಾಘಿಸಿದರು.

19 ಸದಸ್ಯರ ಭಾರತದ ಪ್ಯಾರಾಥ್ಲೀಟ್ ತಂಡ ಸ್ವದೇಶಕ್ಕೆ ವಾಪಸಾಗಿದ್ದು, ರಿಯೋದಲ್ಲಿ 2 ಚಿನ್ನ,1 ಬೆಳ್ಳಿ ಹಾಗೂ 1 ಕಂಚು ಜಯಿಸಿತ್ತು. ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್‌ಗಳನ್ನು ಭೇಟಿಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪದಕ ವಿಜೇತರುಗಳ ಪ್ರಯತ್ನ ಶ್ಲಾಘನೀಯ ಎಂದು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

18 ಪ್ಯಾರಾಥ್ಲೀಟ್‌ಗಳಿಗೆ ಪ್ರತ್ಯೇಕವಾಗಿ ಮೋದಿ ಟ್ವೀಟ್ ಮಾಡಿದ್ದಾರೆ.

ಹೈಜಂಪ್‌ಪಟು ಮಾರಿಯಪ್ಪನ್ ತಂಗವೇಲು, ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಚಿನ್ನದ ಪದಕ ಹಾಗೂ ಶಾಟ್‌ಪುಟ್ ಪಟು ದೀಪಾ ಮಲಿಕ್ ಹಾಗೂ ಜಾವೆಲಿನ್ ಎಸೆತಗಾರ ವರುಣ್ ಸಿಂಗ್ ಭಾಟಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News