ಚೀನಾ ಟೆನಿಸ್ ಟೂರ್ನಿ: ಸೆರೆನಾ ಅಲಭ್ಯ

Update: 2016-09-23 17:38 GMT

ಹಾಂಕಾಂಗ್, ಸೆ.23: ಭುಜನೋವಿನ ಕಾರಣದಿಂದ ಮುಂಬರುವ ಚೀನಾದಲ್ಲಿ ನಡೆಯಲಿರುವ ಎರಡು ಟೆನಿಸ್ ಟೂರ್ನಿಗಳಿಂದ ಹೊರಗುಳಿಯುತ್ತಿರುವುದಾಗಿ ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಶುಕ್ರವಾರ ತಿಳಿಸಿದ್ದಾರೆ.

‘‘ನನ್ನ ಬಲ ಭುಜ ನೋವಿನ ಕಾರಣದಿಂದ ಮುಂಬರು ವುಹಾನ್ ಓಪನ್ ಹಾಗೂ ಚೀನಾ ಓಪನ್‌ನಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ನಾನು ಟೆನಿಸ್ ಅಭ್ಯಾಸ ನಡೆಸುತ್ತಿರುವೆ. ಆದರೆ, ನಾನು ಟೂರ್ನಿಯಲ್ಲಿ ಆಡುವಷ್ಟು ಫಿಟೆನೆಸ್ ಹೊಂದಿಲ್ಲ’’ ಎಂದು ಸೆರೆನಾ ತಿಳಿಸಿದ್ದಾರೆ.

ಈ ತಿಂಗಳಾರಂಭದಲ್ಲಿ ನಡೆದ ಯುಎಸ್ ಓಪನ್ ಬಳಿಕ ಯಾವುದೇ ಟೂರ್ನಿಯಲ್ಲಿ ಸೆರೆನಾ ಕಾಣಿಸಿಕೊಂಡಿಲ್ಲ. ಯುಎಸ್ ಓಪನ್ ಸೆಮಿ ಫೈನಲ್‌ನಲ್ಲಿ ಝೆಕ್‌ನ ಕಾರೊಲಿನಾ ಪ್ಲಿಸ್ಕೋವಾ ವಿರುದ್ಧ ಸೋತಿದ್ದ ಸೆರೆನಾ ದೀರ್ಘಕಾಲದಿಂದ ಕಾಯ್ದುಕೊಂಡಿದ್ದ ನಂ.1 ಸ್ಥಾನ ಕಳೆದುಕೊಂಡಿದ್ದರು.

ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದ ಸೆರೆನಾ ಜುಲೈನಲ್ಲಿ ಭುಜ ನೋವಿನ ಕಾರಣದಿಂದ 2 ಟೂರ್ನಿಯಿಂದ ಹಿಂದೆ ಸರಿದಿದ್ದರು. ಗಾಯದ ಸಮಸ್ಯೆಯಿಂದಾಗಿ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೆರೆನಾ ಒಲಿಂಪಿಕ್ಸ್‌ನಲ್ಲಿ 3ನೆ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ವಿರುದ್ಧ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News