ರಿಯೋ ಒಲಿಂಪಿಕ್ಸ್ ಪದಕ ವಿಜೇತ ಸಿಂಧು, ಸಾಕ್ಷಿಗೆ ಕೇರಳದಲ್ಲಿ ಸನ್ಮಾನ
ತಿರುವನಂತಪುರ, ಸೆ.23: ಸರಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಾದ ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲಿಕ್‌ಗೆ ಶುಕ್ರವಾರ ಇಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಏಷ್ಯಾದ ಅತ್ಯಂತ ದೊಡ್ಡದಾದ ಬಾಲಕಿಯರ ಶಾಲೆ ಎಂದು ಪರಿಗಣಿಸಲ್ಪಟ್ಟಿರುವ ಕಾಟನ್‌ಹಿಲ್ ಬಾಲಕಿಯರ ಹೈಯರ್ ಸೆಕಂಡರಿ ಶಾಲೆಯಲ್ಲಿ ರಾಜ್ಯ ಕ್ರೀಡಾ ಕೌನ್ಸಿಲ್ ಹಾಗೂ ಕ್ರೀಡಾ ನಿರ್ದೇಶನಾಲಯದ ಜಂಟಿ ಆಶ್ರಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಿಂಧು ಹಾಗೂ ಸಾಕ್ಷಿ ಮಲಿಕ್‌ರ ಕೋಚ್ ಪಿ. ಗೋಪಿಚಂದ್ ಹಾಗೂ ಮನ್‌ದೀಪ್ ಸಿಂಗ್‌ರನ್ನು ಸನ್ಮಾನಿಸಲಾಯಿತು. ಇಬ್ಬರಿಗೆ ಕ್ರಮವಾಗಿ 10 ಲಕ್ಷ ರೂ. ಹಾಗೂ 5 ಲಕ್ಷ ರೂ. ನಗದು ಬಹುಮಾನ ನೀಡಲಾಯತು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ 50 ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ನೀಡಲಾಯಿತು. ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಹರ್ಯಾಣದ ಕುಸ್ತಿತಾರೆ ಸಾಕ್ಷಿ ಮಲಿಕ್‌ಗೆ 25 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು.
ರಿಯೋ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ಇಬ್ಬರು ಒಲಿಂಪಿಕ್ಸ್ ಪದಕ ವಿಜೇತರು ಕೇರಳ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿ.ವಿಜಯನ್ ಗೈರು ಹಾಜರಿದ್ದರು ಎಂದು ಸಿಎಂಒ ಮೂಲಗಳು ತಿಳಿಸಿವೆ.
‘‘ಕೇರಳದಲ್ಲಿ ಉತ್ತಮ ಕ್ರೀಡಾ ಪ್ರತಿಭೆಗಳಿದ್ದಾರೆ. ರಾಜ್ಯ ಸರಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಬೆಂಬಲ ನೀಡುತ್ತಿದೆ ಎಂದು ಸಿಂಧು ಶ್ಲಾಘಿಸಿದರು.