ಶ್ರೀಕಾಂತ್ ಸವಾಲು ಅಂತ್ಯ

Update: 2016-09-23 18:22 GMT

ಟೋಕಿಯೊ, ಸೆ.23: ಜಪಾನ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಜರ್ಮನಿಯ ಮಾರ್ಕ್ ಝ್ವೆಬ್ಲೆರ್ ವಿರುದ್ಧ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತೀಯರ ಸವಾಲಿಗೆ ತೆರೆ ಬಿದ್ದಿದೆ.

ರಿಯೋ ಒಲಿಂಪಿಕ್ಸ್‌ನ ಬಳಿಕ ಮೊದಲ ಟೂರ್ನಿಯಲ್ಲಿ ಸ್ಪರ್ಧಿಸಿದ 8ನೆ ಶ್ರೇಯಾಂಕದ ಶ್ರೀಕಾಂತ್ 58 ನಿಮಿಷಗಳ ಹೋರಾಟದಲ್ಲಿ ವಿಶ್ವದ ನಂ.15ನೆ ಮಾರ್ಕ್ ವಿರುದ್ಧ 21-18, 14-21, 19-21 ನೇರ ಗೇಮ್‌ಗಳಿಂದ ಸೋತಿದ್ದಾರೆ.

ಶ್ರೀಕಾಂತ್ ಈ ಪಂದ್ಯಕ್ಕೆ ಮೊದಲು ಮಾರ್ಕ್ ವಿರುದ್ಧ 2-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದರು. ಕಳೆದ ಬಾರಿ ಚೀನಾ ಓಪನ್‌ನಲ್ಲಿ ಮಾರ್ಕ್‌ರನ್ನು ಮಣಿಸಿದ್ದರು.

ಜಪಾನ್ ಓಪನ್‌ನಲ್ಲಿ ಈ ಇಬ್ಬರ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಅಂತಿಮವಾಗಿ ಜರ್ಮನಿಯ ಆಟಗಾರ ಜಯಭೇರಿ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News