ಜೂನಿಯರ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ದ್ವಿತೀಯ ಸ್ಥಾನ

Update: 2016-09-23 18:23 GMT

ಹೊಸದಿಲ್ಲಿ, ಸೆ.23: ಜೂನಿಯರ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 9 ಚಿನ್ನ, 5 ಬೆಳ್ಳಿ ಹಾಗೂ 10 ಕಂಚು ಸಹಿತ ಒಟ್ಟು 24 ಪದಕಗಳನ್ನು ಜಯಿಸಿರುವ ಭಾರತದ ಶೂಟರ್‌ಗಳು ಪದಕ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ.

ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ಗುರುವಾರ ಲಕ್ಷ, ಕಿಸ್ಮತ್ ಚೋಪ್ರಾ ಹಾಗೂ ಮಾನವಾದಿತ್ಯ ಸಿಂಗ್ ರಾಥೋರ್ ಪುರುಷರ ಟ್ರಾಪ್ ವಿಭಾಗದಲ್ಲಿ 375ರಲ್ಲಿ 347 ಅಂಕ ಗಳಿಸಿ ಕಂಚಿನ ಪದಕ ಗೆದ್ದುಕೊಂಡರು. ಇಟಲಿ(360) ಚಿನ್ನ ಹಾಗೂ ಆಸ್ಟ್ರೇಲಿಯ(348) ಬೆಳ್ಳಿ ಪದಕ ಜಯಿಸಿತು.

ಪದಕ ಪಟ್ಟಿಯಲ್ಲಿ ರಶ್ಯ 12 ಚಿನ್ನ ಸಹಿತ ಒಟ್ಟು 25 ಪದಕಗಳನ್ನು ಜಯಿಸಿ ಅಗ್ರ ಸ್ಥಾನ ಪಡೆದಿದೆ. ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 18 ದೇಶಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News