ಕೆ.ಎಲ್. ರಾಹುಲ್ ಹಿಡಿದ ಕ್ಯಾಚ್ ಗೆ ಟಾಮ್ ಲಥಾಮ್ ಔಟಾಗಿಲ್ಲ ಏಕೆ ?
ಕಾನ್ಪುರ, ಸೆ.24: ಭಾರತ ಇಲ್ಲಿ ಆಡುತ್ತಿರುವ ಐತಿಹಾಸಿಕ 500ನೆ ಟೆಸ್ಟ್‌ನ ಎರಡನೆ ದಿನದಾಟದಲ್ಲಿ ನ್ಯೂಝಿಲೆಂಡ್‌ನ ಬ್ಯಾಟ್ಸ್‌ಮನ್ ಟಾಮ್ ಲಥಾಮ್ ಅವರು ಕೆಎಲ್ ರಾಹುಲ್ ಪಡೆದ ಕ್ಯಾಚ್‌ಗೆ ಔಟಾಗಿಲ್ಲ ಏಕೆ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ.
ಇನಿಂಗ್ಸ್‌ನ 37ನೆ ಓವರ್‌ನಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಲಥಾಮ್ ನೀಡಿದ ಕ್ಯಾಚ್‌ನ್ನು ಶಾರ್ಟ್‌ಲೆಗ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ರಾಹುಲ್ ಕ್ಯಾಚ್ ಪಡೆದುಕೊಂಡಿದ್ದರು. ಆದರೆ, ಚೆಂಡು ರಾಹುಲ್‌ರ ಕೈಸೇರುವ ಮೊದಲು ಅವರು ಧರಿಸಿದ್ದ ಹೆಲ್ಮೆಟ್‌ಗೆ ಬಡಿದಿತ್ತು. ಇದರಿಂದ ಗೊಂದಲಕ್ಕೀಡಾದ ಅಂಪೈರ್ ರಿಡರ್ಚ್ ಕೆಟ್ಟೆಲ್‌ಬೊರೊಫ್ ಮೂರನೆ ಅಂಪೈರ್ ನೆರವು ಪಡೆದು ನಾಟೌಟ್ ತೀರ್ಪು ನೀಡಿದ್ದರು. ಆದರೆ, ರಿಪ್ಲೇಯಲ್ಲಿ ಲಾಥಮ್ ಬಾರಿಸಿದ ಚೆಂಡು ರಾಹುಲ್ ಧರಿಸಿದ್ದ ಹೆಲ್ಮೆಟ್‌ನ ಗ್ರಿಲ್‌ಗೆ ತಾಗಿರುವುದು ಸ್ಪಷ್ಟವಾಗಿತ್ತು. ಈಗಿನ ಕ್ರಿಕೆಟ್‌ನ ನಿಯಮ ಸಿಸಿಬಿ 32ರ ಪ್ರಕಾರ ಲಾಥಮ್ ನಾಟೌಟ್.
ನಿಯಮದ ಪ್ರಕಾರ, ಚೆಂಡು ಫೀಲ್ಡಿಂಗ್ ನಿರತ ಯಾವುದೇ ಆಟಗಾರನ ಹೆಲ್ಮೆಟ್‌ಗೆ ತಾಗಿ, ಫೀಲ್ಡರ್ ಚೆಂಡನ್ನು ಕ್ಯಾಚ್ ಪಡೆದರೂ ಅದು ಕ್ಯಾಚ್ ಔಟ್ ಆಗದು. ಸಿಸಿಬಿ ನಿಯಮದ ಪ್ರಕಾರ ಮೂರನೆ ಅಂಪೈರ್ ಎ.ಕೆ. ಚೌಧರಿ ಅವರು ಕಿವೀಸ್ ಬ್ಯಾಟ್ಸ್‌ಮನ್ ಟಿಮ್ ಲಥಾಮ್‌ಗೆ ನೀಡಿದ ನಾಟೌಟ್ ತೀರ್ಪು ಸರಿಯಾಗಿಯೇ ಇದೆ.
ಸಿಸಿಬಿ ನಿಯಮದ ಪ್ರಕಾರ, ಒಂದು ವೇಳೆ ಚೆಂಡು ಫೀಲ್ಡರ್‌ನ ಹೆಲ್ಮೆಟ್‌ಗೆ ಬಡಿದರೆ, ಫೀಲ್ಡರ್ ಅಥವಾ ಫೀಲ್ಡರ್‌ನ ಸಹ ಆಟಗಾರ ಚೆಂಡನ್ನು ಸ್ಟಂಪ್‌ನತ್ತ ಎಸೆದು ಬ್ಯಾಟ್ಸ್‌ಮನ್‌ನ್ನು ರನೌಟ್ ಮಾಡುವ ಅವಕಾಶವಿದೆ.