ಅಧ್ಯಕ್ಷರಾಗಿ ಅಜಯ್ ಸಿಂಗ್ ಆಯ್ಕೆ

Update: 2016-09-25 18:12 GMT

   ಮುಂಬೈ, ಸೆ.25: ಭಾರತೀಯ ಬಾಕ್ಸಿಂಗ್‌ನಲ್ಲಿ ಕಳೆದ ನಾಲ್ಕು ವರ್ಷಗಳ ಆಡಳಿತ ಬಿಕ್ಕಟ್ಟಿಗೆ ತೆರೆ ಬೀಳುವ ನಿರೀಕ್ಷೆಯೊಂದಿಗೆ ಭಾರತದ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ರವಿವಾರ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉದ್ಯಮಿ ಅಜಯ್ ಸಿಂಗ್ ಭಾರೀ ಅಂತರದ ಮತಗಳಿಂದ ಚುನಾಯಿತರಾದರು. ಅಜಯ್ 49 ಮತಗಳನ್ನು ಪಡೆದರೆ, ಪ್ರತಿ ಸ್ಪರ್ಧಿ ದಿಲ್ಲಿಯ ರೋಹಿತ್ ಜೈನ್ ಕೇವಲ 15 ಮತ ಪಡೆದರು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ ವೀಕ್ಷಕರು ಹಾಗೂ ಕ್ರೀಡಾ ಸಚಿವಾಲಯದ ಮೇಲುಸ್ತುವಾರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಒಶಿಯಾನಿಯ ವಲಯ ಉಪಾಧ್ಯಕ್ಷ ಎಡ್ಗರ್ ಟನ್ನೆರ್ ಎಐಬಿಎನ್ನು ಪ್ರತಿನಿಧಿಯಾಗಿ ಭಾಗವಹಿಸಿದರು. ಕ್ರೀಡಾ ಸಚಿವಾಲಯವು ಭಾರತದ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಸುಶ್ಮಿತಾ ಜೋಶಿ ಹಾಜರಿದ್ದರು.

51ರ ಹರೆಯದ ಸಿಂಗ್ ಉತ್ತರ ಖಂಡವನ್ನು ಪ್ರತಿನಿಧಿಸುತ್ತಿದ್ದು, ಈ ಹಿಂದೆ ಸ್ಪೈಸ್ ಜೆಟ್ ಏರ್‌ವೇಸ್‌ನ ಚೇರ್ಮನ್ ಹಾಗು ಆಡಳಿತ ನಿರ್ದೇಶಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News