ಪಾನ್ ಪೆಸಿಫಿಕ್ ಓಪನ್: ವೋಝ್ನಿಯಾಕಿ ಚಾಂಪಿಯನ್

Update: 2016-09-25 18:13 GMT

ಟೋಕಿಯೊ, ಸೆ.25: ವಿಶ್ವದ ಮಾಜಿ ನಂ.1 ಆಟಗಾರ ಕ್ಯಾರೊಲಿನ್ ವೋಝ್ನಿಯಾಕಿ ಪಾನ್ ಪೆಸಿಫಿಕ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ರವಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವೋಝ್ನಿಯಾಕಿ ಜಪಾನ್‌ನ ನಯೊಮಿ ಒಸಾಕಾರನ್ನು 7-5, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಈ ವರ್ಷ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದರು. ಎರಡನೆ ಬಾರಿ ಪಾನ್ ಫೆಸಿಫಿಕ್ ಓಪನ್‌ನಲ್ಲಿ ಚಾಂಪಿಯನ್ ಆದರು.

ಸತತ ಗಾಯದ ಸಮಸ್ಯೆಯಿಂದ ಕಂಗಾಲಾಗಿದ್ದ ವೋಝ್ನಿಯಾಕಿ ಆಗಸ್ಟ್‌ನಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ 74ನೆ ಸ್ಥಾನ ಪಡೆದಿದ್ದರು. 2007ರ ಬಳಿಕ ಮೊದಲ ಬಾರಿ ಒಂದೂ ಪ್ರಶಸ್ತಿಯನ್ನು ಜಯಿಸಲು ಸಾಧ್ಯವಾಗದ ಕಾರಣ ನಿವೃತ್ತಿಯಾಗಲಿದ್ದಾರೆಂಬ ವದಂತಿಯೂ ಹರಡಿತ್ತು. ವೈಲ್ಡ್‌ಕಾರ್ಡ್ ಆಟಗಾರ್ತಿ ಒಸಾಕಾ ಮೊದಲ ಬಾರಿ ಡಬ್ಲುಟಿಎ ಟೂರ್‌ನಲ್ಲಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News