ಟೆಸ್ಟ್‌ನಲ್ಲಿ ಗುಲಾಬಿ ಬಣ್ಣದ ಚೆಂಡು ಬಳಕೆ ಸದ್ಯಕ್ಕಿಲ್ಲ: ಠಾಕೂರ್

Update: 2016-09-26 17:31 GMT

 ಹೊಸದಿಲ್ಲಿ, ಸೆ.26: ‘‘ಈ ವರ್ಷದ ಸ್ವದೇಶಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಗುಲಾಬಿ ಬಣ್ಣದ ಚೆಂಡನ್ನು ಬಳಸುವುದಿಲ್ಲ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಫೆಬ್ರವರಿ-ಮಾರ್ಚ್ ತನಕ ನಡೆಯಲಿರುವ ಸುದೀರ್ಘ 13 ಟೆಸ್ಟ್ ಸರಣಿಯಲ್ಲಿ ಭಾರತ ಮೊತ್ತ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲಿದೆ ಎಂಬ ವದಂತಿಗೆ ಠಾಕೂರ್ ತೆರೆ ಎಳೆದಿದ್ದಾರೆ.

‘‘ಆಸ್ಟ್ರೇಲಿಯದಲ್ಲಿ ಈಗಾಗಲೇ ಬಳಕೆಗೆ ಬಂದಿರುವ ಪಿಂಕ್ ಚೆಂಡನ್ನು ಭಾರತದ ಪಿಚ್‌ನಲ್ಲಿ ಬಳಕೆಗೆ ತರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ದುಲೀಪ್ ಟ್ರೋಫಿಯಲ್ಲಿ ಇನ್ನಷ್ಟು ಪ್ರಯೋಗ ನಡೆಸಬೇಕಾಗಿದೆ’’ ಎಂದು ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.

 ‘‘ಪಿಂಕ್ ಚೆಂಡಿನ ಬಳಕೆ ಬಗ್ಗೆ ಈಗಲೇ ಏನೂ ಹೇಳಲಾಗದು. ದುಲೀಪ್ ಟ್ರೋಫಿಯ ಹಗಲು-ರಾತ್ರಿ ಪಂದ್ಯದಲ್ಲಿ ಪಿಂಕ್ ಚೆಂಡನ್ನು ಬಳಸಲಾಗಿತ್ತು. ಅದು ದೊಡ್ಡ ಯಶಸ್ಸನ್ನು ಕಂಡಿದೆ. ಆದರೆ, ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಎಲ್ಲಾ ಮಗ್ಗಲುಗಳಲ್ಲೂ ನೋಡಬೇಕಾಗಿದೆ’’ ಎಂದು ಠಾಕೂರ್ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News