ಕೆಪಿಎಲ್: ಬಳ್ಳಾರಿ ಜಯಭೇರಿ

Update: 2016-09-26 17:54 GMT

ಹುಬ್ಬಳ್ಳಿ, ಸೆ.26: ಐದನೆ ಆವೃತ್ತಿಯ ಕೆಪಿಎಲ್ ಟ್ವೆಂಟಿ-20 ಟೂರ್ನಿಯ ಮಳೆ ಬಾಧಿತ 21ನೆ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್‌ ವಿರುದ್ಧ ಜಯ ಸಾಧಿಸಿ ಗೆಲುವಿನ ಹಾದಿಗೆ ಮರಳಿದೆ.

 ಬಳ್ಳಾರಿ ತಂಡ ರನ್ ಬೆನ್ನಟ್ಟುವಾಗ ಮಳೆ ಅಡ್ಡಿಪಡಿಸಿದ ಕಾರಣ ಗೆಲುವಿಗೆ 18 ಓವರ್‌ಗಳಲ್ಲಿ 129 ರನ್ ಪರಿಷ್ಕತ ಗುರಿ ನೀಡಲಾಯಿತು. ರೋಹನ್ ಕದಂ(53 ರನ್, 36 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಅಮಿತ್ ವರ್ಮಾ(30 ರನ್, 14 ಎಸೆತ, 1 ಬೌಂಡರಿ, 3 ಸಿಕ್ಸರ್) ಬಳ್ಳಾರಿ ತಂಡ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಲು ನೆರವಾದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಳಗಾವಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೆ. ಅಬ್ಬಾಸ್(52 ರನ್) ಹಾಗೂ ಎಸ್. ಮ್ಯಾನೇಜರ್(32) 3ನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದ ಕಾರಣ ಬೆಳಗಾವಿ ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು. ಬಳ್ಳಾರಿ ಬೌಲರ್‌ಗಳಾದ ಪಿಎ ಜೈನ್(3-33),ಪ್ರಸಿದ್ಧ ಕೃಷ್ಣ(2-26) ಹಾಗೂ ಅಖಿಲ್(2-19) ಬೆಳಗಾವಿಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಬಳ್ಳಾರಿಯ ರನ್ ಚೇಸಿಂಗ್ ಆರಂಭಕ್ಕೆ ಮೊದಲು ಮಳೆ ಆಗಮಿಸಿತು. ಈ ಹಿನ್ನೆಲೆಯಲ್ಲಿ 2 ಓವರ್ ಕಡಿತಗೊಳಿಸಲಾಯಿತು. 18 ಓವರ್‌ಗಳಲ್ಲಿ 129 ರನ್ ಗುರಿ ಪಡೆದ ಬಳ್ಳಾರಿ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್ ಕೆ.ಬಿ. ಪವನ್(7) ಹಾಗೂ ಕಾರ್ತಿಕ್(4) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು.

ಆಗ 4ನೆ ವಿಕೆಟ್‌ಗೆ 53 ರನ್ ಜೊತೆಯಾಟವನ್ನು ನಡೆಸಿದ ಕದಮ್ ಹಾಗೂ ನಾಯಕ ಅಮಿತ್ ವರ್ಮಾ ತಂಡಕ್ಕೆ ಆಸರೆಯಾದರು. ಔಟಾಗದೆ 20 ರನ್ ಗಳಿಸಿದ ಚಿರಂಜೀವಿ ತಂಡವನ್ನು 16.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.

ಬಳ್ಳಾರಿ ಬ್ಯಾಟ್ಸ್‌ಮನ್ ರೋಹನ್ ಕದಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

ಬೆಳಗಾವಿ ಪ್ಯಾಂಥರ್ಸ್‌: 20 ಓವರ್‌ಗಳಲ್ಲಿ 138/8

(ಕೆ. ಅಬ್ಬಾಸ್ 52, ಎಸ್. ಮ್ಯಾನೇಜರ್ 32, ಜೈನ್ 3-33, ಪಿ.ಕೃಷ್ಣ 2-26, ಅಖಿಲ್ 2-19)

ಬಳ್ಳಾರಿ ಟಸ್ಕರ್ಸ್: 16.5 ಓವರ್‌ಗಳಲ್ಲಿ 129/5

(ರೋಹನ್ ಕದಮ್ 53, ಅಮಿತ್ ವರ್ಮ 30, ಚಿರಂಜೀವಿ ಔಟಾಗದೆ 20, ಪ್ರದೀಪ್ 2-13)

ಬಿಜಾಪುರ ಬುಲ್ಸ್‌ಗೆ ಭರ್ಜರಿ ಜಯ

ಹುಬ್ಬಳ್ಳಿ, ಸೆ.26: ಎಂಜಿ ನವೀನ್(52)ಅವರ ಅರ್ಧಶತಕದ ಬೆಂಬಲದಿಂದ ಬಿಜಾಪುರ ಬುಲ್ಸ್ ತಂಡ ರಾಕ್‌ಸ್ಟಾರ್ಸ್‌ ತಂಡದ ವಿರುದ್ಧದ ಕೆಪಿಎಲ್‌ನ 22ನೆ ಪಂದ್ಯದಲ್ಲಿ 68 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 176 ರನ್ ಕಠಿಣ ಗುರಿ ಪಡೆದ ರಾಕ್‌ಸ್ಟಾರ್ಸ್‌ ತಂಡ 20 ಓವರ್‌ಗಳಲ್ಲಿ 107 ರನ್‌ಗೆ ಆಲೌಟಾಯಿತು. ಖಾದಿರ್(3-18) ಹಾಗೂ ಅರ್ಷ್‌ದೀಪ್(2-19) ಶಿಸ್ತುಬದ್ಧ ಬೌಲಿಂಗ್ ಮಾಡಿದರು. ರಾಕ್‌ಸ್ಟಾರ್ಸ್‌ನ ಪರ ತೇಜ(28) ಹಾಗೂ ಶರತ್(24) ಎರಡಂಕೆ ಸ್ಕೋರ್ ದಾಖಲಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರದ ಪರ ಭರತ್ ಚಿಪ್ಲಿ(32), ಶೆಖಾವತ್(16), ಅರ್ಷ್‌ದೀಪ್ ಸಿಂಗ್(14) ಹಾಗೂ ಕಾರಿಯಪ್ಪ(ಔಟಾಗದೆ 18) ಪ್ರಮುಖ ಕಾಣಿಕೆ ನೆರವಿನಿಂದ 8 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿದೆ.

ರಾಕ್‌ಸ್ಟಾರ್ಸ್‌ ಪರ ಆರ್.ಗೌಡ(3-24) ಯಶಸ್ವಿ ಬೌಲರ್ ಎನಿಸಿಕೊಂಡರು. ತೇಜ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News