ಬೆಳ್ಳಿ ಗೆದ್ದ ಸಿಂಧುಗೆ ಚಿನ್ನದಂತಹ ಡೀಲ್ ! ಮೂರು ವರ್ಷಕ್ಕೆ ಎಷ್ಟು ಕೋಟಿ ಗೊತ್ತೇ ?
ಹೈದರಾಬಾದ್, ಸೆ.27: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ತಾರೆ ಪಿ.ವಿ. ಸಿಂಧು ಹಣದ ಹೊಳೆ ತೇಲುತ್ತಿದ್ದಾರೆ.ಇದೀಗ ಅವರು ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಬೇಸ್‌ಲೈನ್‌ನೊಂದಿಗೆ ಮೂರು ವರ್ಷಗಳಿಗೆ 50 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ
ಸಿಂಧು ಅವರದ್ದು ದೊಡ್ಡ ಡೀಲ್. ಕ್ರಿಕೆಟಿಗರನ್ನು ಹೊರತುಪಡಿಸಿದರೆ ಇತರ ಆಟಗಾರರಿಗೆ ಸಿಕ್ಕಿದ ದೊಡ್ಡ ಡೀಲ್ ಇದಾಗಿದೆ. ಬೇಸ್‌ಲೈನ್ ಕಂಪನಿಯ ಆಡಳಿತ ನಿರ್ದೇಶಕ ತುಹಿನ್ ಮಿಶ್ರಾ ಅವರು ಸಿಂಧು ಅವರು ಮಾಡಿಕೊಂಡಿರುವ ಡೀಲ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಿಂಧು ಅವರ ಹೆಚ್ಚುತ್ತಿರುವ ಜನಪ್ರಿಯತೆ ಹಲವು ಕಂಪನಿಗಳ ಗಮನ ಸೆಳೆದಿದೆ. ಮುಂದಿನ ಮೂರು ವರ್ಷಗಳ ಕಾಲ ಅವರ ಜಾಹೀರಾತು ವೌಲ್ಯವನ್ನು ಹೆಚ್ಚಿಸಲು ಬೇಸ್‌ಲೈನ್ ಕಂಪನಿ ಪ್ರಯತ್ನಿಸಲಿದೆ. ಅವರ ಅಪೂರ್ವ ಯಶಸ್ಸು ,ಸೌಜನ್ಯ ಮತ್ತು ವೌಲ್ಯಗಳ ಮೂಲಕ ಮಹಿಳೆಯರಿಗೆ ಶಕ್ತಿ ತಂದುಕೊಟ್ಟಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಬೇಸ್‌ಲೈನ್ ಮುಂದೆ ಸಿಂಧು ಅವರ ಬ್ರಾಂಡ್ ಪ್ರೊಫೈಲಿಂಗ್, ಪರವಾನಿಗೆ, ಒಡಂಬಡಿಕೆ ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳಲಿದೆ. 16 ಕಂಪನಿಗಳು ಸಿಂಧು ಜೊತೆ ಜಾಹೀರಾತು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದೆ. ಈಗಾಗಲೇ 9 ಕಂಪನಿಗಳ ಜೊತೆ ಒಪ್ಪಂದ ಅಂತಿಮ ಹಂತದಲ್ಲಿದೆ. ಅವರಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿ ತವರಿಗೆ ವಾಪಸಾದ ಬಳಿಕ ಹಲವು ಕಂಪನಿಗಳು ಅವರನ್ನು ಭೇಟಿಯಾಗಿ ಜಾಹೀರಾತು ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ.
.