×
Ad

ಸಾನಿಯಾ ಜೋಡಿ ಮೂರನೆ ಸುತ್ತಿಗೆ ಲಗ್ಗೆ

Update: 2016-09-27 23:37 IST

ವೂಹಾನ್, ಸೆ.27: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಝಾ ಝೆಕ್‌ನ ಜೊತೆಗಾರ್ತಿ ಬಾರ್ಬೊರಾ ಸ್ಟ್ರೈಕೋವಾರೊಂದಿಗೆ ವೂಹಾನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಇಂಡೋ-ಝೆಕ್ ಜೋಡಿ ಸಾನಿಯಾ-ಸ್ಟ್ರೈಕೋವಾ ಅವರು ಕೆನಡಾ-ಸ್ಪೇನ್‌ನ ಎದುರಾಳಿ ಗ್ಯಾಬ್ರಿಯೆಲಾ ಡಬ್ರೊಸ್ಕಿ ಹಾಗೂ ಮರಿಯಾ ಜೋಸ್ ಜೋಡಿಯನ್ನು 3-6, 6-3, 10-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ರನ್ನು ತೊರೆದ ಬಳಿಕ ಝೆಕ್‌ನ ಸ್ಟೈಕೋವಾರೊಂದಿಗೆ ಸಾನಿಯಾ ಡಬಲ್ಸ್ ಪಂದ್ಯ ಆಡುತ್ತಿದ್ದಾರೆ.

ಸಾನಿಯಾ-ಸ್ಟ್ರೈಕೋವಾ ಒಂದಾದ ಬಳಿಕ ಸಿನ್ಸಿನಾಟಿ ಓಪನ್‌ನಲ್ಲಿ ಮೊದಲ ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ವಾರ ಟೋಕಿಯೊದಲ್ಲಿ ಪಾನ್ ಪೆಸಿಫಿಕ್ ಓಪನ್‌ನ್ನು ಗೆದ್ದುಕೊಂಡಿದ್ದರು.

ಉತ್ತಮ ಪ್ರದರ್ಶನ ನೀಡುತ್ತಿರುವ ಸಾನಿಯಾ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ 9,730 ಅಂಕವನ್ನು ಗಳಿಸಿ ವಿಶ್ವದ ನಂ.1 ಆಟಗಾರ್ತಿ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News