ಕೋಲ್ಕತಾ ಟೆಸ್ಟ್‌ಗೆ ಜಿಮ್ಮಿ ನಿಶಮ್ ಇಲ್ಲ
ಕೋಲ್ಕತಾ, ಸೆ.28:ಗಾಯಗೊಂಡಿರುವ ನ್ಯೂಝಿಲೆಂಡ್‌ನ ಆಲ್‌ರೌಂಡರ್ ಜಿಮ್ಮಿ ನಿಶಮ್ ಅವರು ಶುಕ್ರವಾರ ಕೋಲ್ಕತಾದಲ್ಲಿ ಆರಂಭಗೊಳ್ಳಲಿರುವ ಆತಿಥೇಯ ಭಾರತ ವಿರುದ್ಧದ ಎರಡನೆ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.
ಪಕ್ಕೆಲುಬು ನೋವಿನಿಂದ ಬಳಲುತ್ತಿರುವ ನಿಶಮ್ ಅವರು ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲೂ ಆಡಿರಲಿಲ್ಲ. ಜಿಮಿ್ಮ ಬದಲಿಗೆ ಆಫ್ ಸ್ಪಿನ್ನರ್ ಮಾರ್ಕ್ ಕ್ರೆಗ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ಮೊದಲ ಟೆಸ್ಟ್‌ನಲ್ಲಿ ಮಾರ್ಕ್ ಕ್ರೇಗ್ ಅವರಿಂದ ದೊಡ್ಡ ಸಾಧನೆ ಕಂಡು ಬಂದಿರಲಿಲ್ಲ. ಭಾರತ ಈ ಟೆಸ್ಟ್‌ನಲ್ಲಿ 197 ರನ್‌ಗಳ
ಗೆಲುವು ದಾಖಲಿಸಿತ್ತು. ನಿಶಮ್ ಕನಿಷ್ಠ ಒಂದು ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ತಂಡದ ಕೋಚ್ ಮೈಕ್ ಹೆಸನ್ ಹೇಳಿದ್ದಾರೆ. ಆಫ್ ಸ್ಪಿನ್ನರ್ ಜಿತನ್ ಪಟೇಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಅವರು ಗುರುವಾರ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ.
ನ್ಯೂಝಿಲೆಂಡ್ ತಂಡ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ವೇಗದ ಬೌಲರ್ ಟಿಮ್ ಸೌಥಿ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ರವಿಂದ್ರ ಜಡೇಜ ಅವರು ಕಳೆದ ಟೆಸ್ಟ್‌ನಲ್ಲಿ 20 ವಿಕೆಟ್‌ಗಳ ಪೈಕಿ 16ರನ್ನು ಹಂಚಿಕೊಂಡಿದ್ದರು. ಭಾರತದ ಚೇತೇಶ್ವರ ಪೂಜಾರ ಎರಡೂ ಇನಿಂಗ್ಸ್‌ಗಳಲ್ಲೂ ಶತಕ ದಾಖಲಿಸಿದ್ದರು.