×
Ad

ಸಾನಿಯಾ-ಸ್ಟ್ರೈಕೋವಾ ಸೆಮಿಫೈನಲ್‌ಗೆ

Update: 2016-09-30 23:13 IST

ವೂಹಾನ್, ಸೆ.30: ಭರ್ಜರಿ ಫಾರ್ಮ್‌ನ್ನು ಮುಂದುವರಿಸಿದ ಸಾನಿಯಾ ಮಿರ್ಝಾ ಹಾಗೂ ಬಾರ್ಬೊರಾ ಸ್ಟ್ರೈಕೋವಾ ಡಬ್ಲುಟಿಎ ವೂಹಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ 2,589,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ಸಾನಿಯಾ ಹಾಗೂ ಸ್ಟ್ರೈಕೋವಾ 6ನೆ ಶ್ರೇಯಾಂಕದ ಹಂಗೇರಿ-ಕಝಕ್‌ನ ಟಿಮಿಯಾ ಬಾಬೊಸ್ ಹಾಗೂ ಯಾರೊಸ್ಲೊವಾ ಶ್ವೆಡೋವಾರನ್ನು 6-3, 7-6(5) ನೇರ ಸೆಟ್‌ಗಳಿಂದ ಮಣಿಸಿದ್ದಾರೆ.

ಒಂದು ಗಂಟೆ ಹಾಗೂ 18 ನಿಮಿಷಗಳ ಸ್ಪರ್ಧೆಯಲ್ಲಿ ಸಾನಿಯಾ-ಸ್ಟ್ರೈಕೋವಾ ಎದುರಾಳಿ ಆಟಗಾರ್ತಿಯ ಹೋರಾಟವನ್ನು ನಾಲ್ಕು ಹತ್ತಿಕ್ಕದರು ಹಾಗೂ ಮೂರು ಬಾರಿ ಸರ್ವ್‌ನ್ನು ಕೈಬಿಟ್ಟರು.

ಸಾನಿಯಾ-ಸ್ಟ್ರೈಕೋವಾ ಮುಂದಿನ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ತೈಪೆಯ ಜೋಡಿ ಹಾವೊ-ಚಿಂಗ್ ಚಾನ್ ಹಾಗೂ ಯಂಗ್-ಜಾನ್ ಚಾನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News