ಪ್ರಜಾಪ್ರಭುತ್ವ ಪಾಕಿಸ್ತಾನಕ್ಕೆ ಸೂಕ್ತವಲ್ಲ; ಪರ್ವೇಝ್ ಮುಷರಫ್

Update: 2016-10-02 06:43 GMT

ವಾಷಿಂಗ್ಟನ್, ಅಕ್ಟೋಬರ್ 2: ಪ್ರಜಾಪ್ರಭುತ್ವ ಪಾಕಿಸ್ತಾನದ ಪರಿಸ್ಥಿತಿಗೆ ಸರಿಹೊಂದುವಂತಹದ್ದಲ್ಲ. ಅಲ್ಲಿ ಪಾಕಿಸ್ತಾನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಪಾಕಿಸ್ತಾನದ ಮಾಜಿ ಸೈನಿಕ ಮುಖ್ಯಸ್ಥ ಪರ್ವೇಝ್ ಮುಷರಫ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕು ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿಸಲ್ಪಟ್ಟ ಅಲ್ಲಿ ಸರಕಾರದ ಕೆಟ್ಟ ಆಡಳಿತದಿಂದಾಗಿ ಸೇನೆಯೇ ಪ್ರಧಾನ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದು ವಾಷಿಂಗ್ಟನ್ ಐಡಿಯಾಸ್ ಫೋರಂಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಪಾಕಿಸ್ತಾನದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಂತ್ರಣವೋ, ಸಮಾನತೆಯೋ ಇಲ್ಲ. ಅಂತಹ ವಿಷಯಗಳಲ್ಲಿ ಸಂವಿಧಾನ ಭರವಸೆ ನೀಡುವುದೂ ಇಲ್ಲ. ಪ್ರಜಾಪ್ರಭುತ್ವ ರೀತಿಯ ಕೆಟ್ಟ ಆಡಳಿತ ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ದೇಶವನ್ನು ಹಿಂದುಳಿಯುವಂತೆ ಮಾಡಿದೆ. ಆದ್ದರಿಂದ ನಾಗರಿಕರು ಸೈನ್ಯದ ಮುಖ್ಯಸ್ಥನಲ್ಲಿ ಸಹಾಯವನ್ನು ಕೇಳುತ್ತಿದ್ದಾರೆ. ಹೀಗಾಗಿ ಸೈನ್ಯಕ್ಕೆ ಮಧ್ಯಪ್ರವೇಶಿಸುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತದೆ ಎಂದು ಮುಷರಫ್ ಸೇನಾಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಜನರು ಸೇನೆಯನ್ನು ಪ್ರೀತಿಸುತ್ತಾರೆ. ನಲ್ವತ್ತುವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರುವುದಕ್ಕಾಗಿ ತನಗೆ ಹೆಮ್ಮೆ ಇದೆ. ಎರಡು ಯುದ್ಧದಲ್ಲಿ ಭಾಗವಹಿಸಿದ್ದೇನೆ. ಸೇನೆ ಯಾವುದಾದರೊಂದು ರಾಜಕೀಯ ಪಕ್ಷದ ಹೆಜ್ಜೆ ಅನುಸರಿಸಿ ಅಧಿಕಾರಕ್ಕೆ ಬರುವುದಲ್ಲ. ಆದ್ದರಿಂದ ಸೇನೆಗೆ ಆಡಳಿತದಲ್ಲಿ ನಿಯಂತ್ರಣ ಮತ್ತು ಸಮಾನತೆಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಮುಷರಫ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ಮರಳಲು ಇಚ್ಛಿಸಿದ್ದೇನೆ.ತನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಪಾಕಿಸ್ತಾನದಲ್ಲಿ ಕೇಸು ಹಾಕಲಾಗಿದೆ. ಆದ್ದರಿಂದ ವಿಚಾರಣೆಯನ್ನು ಎದುರಿಸುವೆ. ಆದರೆ ಅಧಿಕಾರಕ್ಕೆ ಬರಲು ಯತ್ನಿಸುವುದಿಲ್ಲ. ಯಾವತ್ತೂ ಭಾರತವೇ ಸಮಸ್ಯೆ ಸೃಷ್ಟಿಸಿದೆ. ಪಾಕಿಸ್ತಾನವಲ್ಲ ಎಂದು ಮುಷರಫ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News