ಉತ್ಪನ್ನಗಳ ಮಾರಾಟಕ್ಕೆ ಧೋನಿ ಹೆಸರು ಬಳಸಲಾಗುತ್ತಿಲ್ಲ: ಮ್ಯಾಕ್ಸ್ ಕಂಪೆನಿ ನ್ಯಾಯಾಲಯಕ್ಕೆ ಹೇಳಿಕೆ
ಹೊಸದಿಲ್ಲಿ, ಅ.4: ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಧೋನಿ ಅವರ ಹೆಸರನ್ನು ತನ್ನ ಉತ್ಪನ್ನಗಳ ಮಾರಾಟಕ್ಕೆ ಬಳಕೆ ಮಾಡುತ್ತಿಲ್ಲ ಎಂದು ಮ್ಯಾಕ್ಸ್ ಮೊಬಿಲಿಂಕ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು ದಿಲ್ಲಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.
ಧೋನಿ ಅವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಕಂಪೆನಿಯ ಆಡಳಿತ ನಿರ್ದೇಶಕ ಅಜಯ್ ಎಸ್.ಅಗರ್‌ವಾಲ್ ಅವರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
2014ರಲ್ಲಿ ನ್ಯಾಯಾಲಯವು ಖಾಸಗಿ ಟೆಲಿಕಾಂ ಕಂಪೆನಿ ಮ್ಯಾಕ್ಸ್ ಮೊಬಿಲಿಂಕ್ ಪ್ರೈವೆಟ್ ಲಿಮಿಟೆಡ್‌ಗೆ ಧೋನಿ ಹೆಸರನ್ನು ಕಂಪೆನಿಯ ಉತ್ಪನ್ನಗಳ ಮಾರಾಟಕ್ಕೆ ಬಳಸದಂತೆ ಆದೇಶ ನೀಡಿತ್ತು.
ಮ್ಯಾಕ್ಸ್ ಮೊಬಿಲಿಂಕ್ ಕಂಪೆನಿಯು ತನ್ನ ಹೆಸರನ್ನು ಉತ್ಪನ್ನಗಳ ಮಾರಾಟ ಮತ್ತು ಉತೇಜನಕ್ಕೆ ಬಳಸುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಜಯ್ ಎಸ್.ಅಗರ್‌ವಾಲ್ ನ್ಯಾಯಾಲಯಕ್ಕೆ ಎ.21ರಂದು ನೀಡಿರುವ ಅಫಿದಾವಿಟ್‌ನಲ್ಲಿ ಕಂಪೆನಿಯು ಧೋನಿಯ ಭಾವಚಿತ್ರ ಮತ್ತು ಅವರ ಹೆಸರನ್ನು ಉತ್ಪನ್ನಗಳ ಮಾರಾಟಕ್ಕೆ ಬಳಕೆ ಮಾಡುವುದನ್ನು 2014ರ ನ.17ರಂದು ನಿಲ್ಲಿಸಲಾಗಿದೆ.
ಧೋನಿ ಅವರು ಒಂದೊಮ್ಮೆ ಮ್ಯಾಕ್ಸ್ ಮೊಬಿಲಿಂಕ್ ಕಂಪೆನಿಯ ಬ್ರಾಂಡ್ ಅಂಬಾಸಡರ್ ಆಗಿದ್ದರು. ಅವರು ಮಾಡಿಕೊಂಡಿದ್ದ ಒಪ್ಪಂದ ಡಿಸೆಂಬರ್ 2012ರಲ್ಲಿ ಕೊನೆಗೊಂಡಿತ್ತು