ಬೊಲಿವಿಯಾ ವಿರುದ್ಧ ಬ್ರೆಝಿಲ್‌ಗೆ ಭರ್ಜರಿ ಜಯ

Update: 2016-10-07 18:19 GMT

ನಟಾಲ್, ಅ.7: ವಿಶ್ವಕಪ್ 2018ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬೊಲಿವಿಯ ವಿರುದ್ಧ 5-0 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಬ್ರೆಝಿಲ್ ತಂಡ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಕೋಪಾ ಅಮೆರಿಕ ಚಾಂಪಿಯನ್ ಚಿಲಿ ತಂಡ ಈಕ್ವಡಾರ್ ವಿರುದ್ಧ 3-0 ಗೋಲುಗಳ ಅಂತರದಿಂದ ಸೋತು ಆಘಾತ ಅನುಭವಿಸಿದೆ. ಕೊಲಂಬಿಯಾ ಕೊನೆಯ ಕ್ಷಣದಲ್ಲಿ ಪರಾಗ್ವೆ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದೆ. ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸೇವೆಯಿಂದ ವಂಚಿತವಾಗಿರುವ ಅರ್ಜೆಂಟೀನ ತಂಡ ಪೆರು ವಿರುದ್ಧ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿದೆ.

ಬ್ರೆಝಿಲ್ ತಂಡದ ಪರ ನೇಮರ್(10ನೆ ನಿಮಿಷ), ಫಿಲಿಪ್ ಕೌಟಿನ್ಹೊ(25ನೆ ನಿ.), ಫಿಲಿಪ್ ಲೂಯಿಸ್(38ನೆ ನಿ.), ಗಾಬ್ರಿಯೆಲ್ ಜೆಸಸ್(44ನೆ ನಿ.) ಹಾಗೂ ರಾಬರ್ಟ್ ಫಿರ್ಮಿನೊ(75ನೆ ನಿ.) ತಲಾ ಒಂದು ಗೋಲು ಬಾರಿಸಿದರು. ನೇಮರ್ ವೃತ್ತಿಜೀವನದಲ್ಲಿ 300ನೆ ಗೋಲು ಬಾರಿಸಿ ಗಮನ ಸೆಳೆದರು.ನೇಮರ್ ಬ್ರೆಝಿಲ್ ಫುಟ್ಬಾಲ್ ಇತಿಹಾಸದಲ್ಲಿ 4ನೆ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News