×
Ad

ಕಬಡ್ಡಿ ವಿಶ್ವಕಪ್: ಆಸ್ಟ್ರೇಲಿಯವನ್ನು ಮಣಿಸಿದ ಭಾರತ

Update: 2016-10-08 23:18 IST

 ಅಹ್ಮದಾಬಾದ್, ಅ.8: ಆತಿಥೇಯ ಭಾರತ ತಂಡ ಶನಿವಾರ ಇಲ್ಲಿ ನಡೆದ ಕಬಡ್ಡಿ ವಿಶ್ವಕಪ್‌ನ ತನ್ನ ಎರಡನೆ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 54-20 ಅಂಕಗಳ ಅಂತರದಿಂದ ಮಣಿಸಿ ಗೆಲುವಿನ ಹಳಿಗೆ ಮರಳಿತು.

ಶುಕ್ರವಾರ ಇಲ್ಲಿ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೇವಲ 2 ಅಂಕಗಳ ಅಂತರದಿಂದ ದಕ್ಷಿಣ ಕೊರಯಾಕ್ಕೆ ಶರಣಾಗಿದ್ದ ಭಾರತ ಇಂದು ಆಸ್ಟ್ರೇಲಿಯ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿ ‘ಎ’ ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಮೊತ್ತ ಮೊದಲ ಬಾರಿಗೆ ಆಡಿದ್ದರೂ 20 ಅಂಕವನ್ನು ಗಳಿಸಿ ಗಮನ ಸೆಳೆಯಿತು.

ಆಸ್ಟ್ರೇಲಿಯ ವಿರುದ್ಧದ ಭರ್ಜರಿ ಗೆಲುವನ್ನು ದೇಶಕ್ಕಾಗಿ ಪ್ರಾಣ ತೆತ್ತ ವೀರ ಸೈನಿಕರಿಗೆ ಅರ್ಪಿಸಲಾಯಿತು.

ಭಾರತ ಅ.11 ರಂದು ನಡೆಯಲಿರುವ ತನ್ನ 3ನೆ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News