×
Ad

ಚೀನಾ ಓಪನ್: ಮರ್ರೆ-ಡಿಮಿಟ್ರೊವ್ ಫೈನಲ್‌ಗೆ

Update: 2016-10-08 23:20 IST

ಬೀಜಿಂಗ್, ಅ.8: ಅಗ್ರ ಶ್ರೇಯಾಂಕಿತ ಆಟಗಾರ ಆ್ಯಂಡಿ ಮರ್ರೆ ಹಾಗೂ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಚೀನಾ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.

ಇಲ್ಲಿ ಶನಿವಾರ 1 ಗಂಟೆ, 31 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮರ್ರೆ ಸ್ಪೇನ್‌ನ ಡೇವಿಡ್ ಫೆರರ್‌ರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಫೆರರ್ ವಿರುದ್ಧ ಸತತ 7ನೆ ಜಯ ದಾಖಲಿಸಿದ ಮರ್ರೆ ಮೊದಲ ಬಾರಿ ಚೀನಾ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ. ಈ ವರ್ಷ ವಿಂಬಲ್ಡನ್ ಟೂರ್ನಿ ಹಾಗೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮರ್ರೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.

 ಕೆನಡಾದ ಮಿಲೊಸ್ ರಾವೊನಿಕ್ ಮಂಡಿನೋವಿನಿಂದ ಸೆಮಿ ಫೈನಲ್‌ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಡಿಮಿಟ್ರೊವ್ ಫೈನಲ್‌ಗೆ ವಾಕ್‌ಓವರ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News