×
Ad

ಐಸಿಸಿ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷರ ಹೇಳಿಕೆ ಪ್ರಸ್ತಾವಿಸಲಿರುವ ಪಿಸಿಬಿ ನಿಯೋಗ

Update: 2016-10-11 23:39 IST

 ಕರಾಚಿ, ಅ.11: ಕೇಪ್‌ಟೌನ್‌ನಲ್ಲಿ ಈ ವಾರ ನಡೆಯಲಿರುವ ಐಸಿಸಿ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ಸಜ್ಜಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ನಿಯೋಗ ಇತ್ತೀಚೆಗೆ ಇಂಡೋ-ಪಾಕ್ ಸಂಬಂಧ ಹಾಗೂ ಕ್ರಿಕೆಟ್ ಪಂದ್ಯದ ಬಗ್ಗೆ ಪ್ರಚೋದಾತ್ಮಕ ಹೇಳಿಕೆ ನೀಡಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಬಗ್ಗೆ ವಿಷಯ ಪ್ರಸ್ತಾವಿಸುವ ಸಾಧ್ಯತೆಯಿದೆ.

‘‘ಈ ಬಾರಿ ಭಾರತದ ಅಧಿಕಾರಿಗಳಿಗೆ ಕಠಿಣ ಉತ್ತರ ನೀಡಲಿದ್ದೇವೆ. ಕ್ರಿಕೆಟ್ ಹಾಗೂ ರಾಜಕಾರಣವನ್ನು ಒಟ್ಟಿಗೆ ಬೆರೆಸಬಾರದೆಂಬ ಪಿಸಿಬಿಯ ನಿಯಮವನ್ನು ಐಸಿಸಿ ಸಭೆಯ ಮುಂದಿಡಲಿದ್ದೇವೆ. ಪಾಕಿಸ್ತಾನದ ನಿಲುವು ಸರಳ..ಅನುರಾಗ್ ಠಾಕೂರ್ ಭಾರತದ ಆಡಳಿತ ಪಕ್ಷದ ರಾಜಕಾರಿಣಿಯಾಗಿ ಹೇಳಿಕೆ ನೀಡುತ್ತಿದ್ದಾರೋ ಅಥವಾ ಬಿಸಿಸಿಐ ಅಧ್ಯಕ್ಷರಾಗಿ ಹೇಳಿಕೆ ನೀಡುತ್ತಿದ್ದಾರೋ? ಎಂದು ಸ್ಪಷ್ಟಪಡಿಸಬೇಕು. ಐಸಿಸಿ ಸಂವಿಧಾನದಲ್ಲಿ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ಬೆರೆಸುವಂತಿಲ್ಲ’’ಎಂದು ಕೇಪ್‌ಟೌನ್‌ಗೆ ನಿರ್ಗಮಿಸುವ ಮೊದಲು ಪಿಸಿಬಿ ನಿಯೋಗದಲ್ಲಿರುವ ಮಾಜಿ ಅಧ್ಯಕ್ಷ ನಜಂ ಸೇಥಿ ಸುದ್ದಿಗಾರರಿಗೆ ತಿಳಿಸಿದರು.

 2007ರ ಬಳಿಕ ಪಾಕ್‌ನೊಂದಿಗೆ ದ್ವಿಪಕ್ಷೀಯ ಸರಣಿ ಆಡಲು ನಿರಾಕರಿಸುತ್ತಿರುವ ಭಾರತದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವಿಸಲು ಪಿಸಿಬಿ ನಿಯೋಗ ನಿರ್ಧರಿಸಿದೆ. ಐಸಿಸಿ ಸ್ಪರ್ಧೆಗಳಲ್ಲಿ ಭಾರತ ಹಾಗೂ ಪಾಕ್ ಪಂದ್ಯಗಳಲ್ಲಿ ಬಂದಿರುವ ಆದಾಯದ ಪಾಲನ್ನು ಇನ್ನಷ್ಟೇ ಸ್ವೀಕರಿಸಬೇಕು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News