ಬ್ರೆಝಿಲ್‌ಗೆ ಚಾಂಪಿಯನ್ಸ್ ಕಿರೀಟ
Update: 2016-10-15 23:03 IST
ಮಾರ್ಗೋವಾ, ಅ.15: ಮೊದಲ ಆವೃತ್ತಿಯ ಬ್ರಿಕ್ಸ್ ಅಂಡರ್-17 ಫುಟ್ಬಾಲ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ತಂಡವನ್ನು 5-1 ಅಂತರದ ಗೋಲುಗಳಿಂದ ಮಣಿಸಿದ ಬ್ರೆಝಿಲ್ ತಂಡ ಪ್ರಶಸ್ತಿ ಎತ್ತಿ ಹಿಡಿದಿದೆ.
ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದುದ್ದಕ್ಕೂ ಬ್ರೆಝಿಲ್ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ಬ್ರೆಝಿಲ್‌ನ ಪರ ಪೌಲೊ ಹೆನ್ರಿಕ್(24ನೆ ನಿಮಿಷ), ವಿನಿಕ್ಯೂಸ್ ಜೋಸ್ ಪೈಕ್ಸೊ(35ನೆ ನಿ.), ವಿಕ್ಟರ್ ಗ್ಯಾಬ್ರಿಯಲ್(40ನೆ, 61ನೆ ನಿ.) ಹಾಗೂ ಅಲನ್ ಡಿಸೋಜಾ(90+1 ನಿ.) ಗೋಲು ಬಾರಿಸಿದರು.
ದಕ್ಷಿಣ ಆಫ್ರಿಕದ ಪರ ಸ್ಮೈಸೊ ಬೊಫೆಲಾ 89ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.
ಬ್ರೆಝಿಲ್ ತಂಡ ಲೀಗ್ ಹಂತದಲ್ಲೂ ದ.ಆಫ್ರಿಕವನ್ನು ಮಣಿಸಿ ತನ್ನ ಉದ್ದೇಶ ಸ್ಪಷ್ಟಪಡಿಸಿತ್ತು.