×
Ad

ಶಾಂೈ ಓಪನ್: ಜೊಕೊವಿಕ್‌ಗೆ ಬಟಿಸ್ಟಾ ಶಾಕ್

Update: 2016-10-15 23:04 IST

 ಶಾಂೈ, ಅ.15: ಶಾಂೈ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ಗೆ ರಾಬರ್ಟೊ ಬಟಿಸ್ಟಾ ಶಾಕ್ ನೀಡಿದ್ದಾರೆ.

 ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ 12 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಕ್‌ರನ್ನು ಸ್ಪೇನ್‌ನ ಬಟಿಸ್ಟಾಗೆ 6-4, 6-4 ನೇರ ಸೆಟ್‌ಗಳಿಂದ ಮಣಿಸಿದರು. ಜೊಕೊವಿಕ್ ಮೊದಲ ಬಾರಿ ಸ್ಪೇನ್ ಆಟಗಾರನಿಗೆ ಶರಣಾದರು.

ಜೊಕೊವಿಕ್ ನೇರ ಸೆಟ್‌ಗಳಿಂದ ಸೋತ ಬಳಿಕ ತನ್ನ ರಾಕೆಟ್‌ನ್ನು ಬಿಸಾಡಿದ್ದಲ್ಲದೆ, ತಾನು ಧರಿಸಿದ್ದ ಶರ್ಟ್‌ನ್ನು ಹರಿದು ತನ್ನ ಹತಾಶೆ ವ್ಯಕ್ತಪಡಿಸಿದರು.

ಜೊಕೊವಿಕ್ ಜೂನ್‌ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ಮೊದಲಿನ ಲಯ ಕಳೆದುಕೊಂಡಿದ್ದಾರೆ. ಜೊಕೊವಿಕ್ ವಿಂಬಲ್ಡನ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೇಗನೆ ಸೋತು ಹೊರ ನಡೆದಿದ್ದರು.

ಬಟಿಸ್ಟಾಗೆ ಶರಣಾಗಿ ಆಘಾತ ಅನುಭವಿಸಿರುವ ಜೊಕೊವಿಕ್ ವಿಶ್ವದ ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬ್ರಿಟನ್‌ನ ಆ್ಯಂಡಿ ಮರ್ರೆ ಅಗ್ರ ಸ್ಥಾನಕ್ಕೇರುವ ಸ್ಪರ್ಧೆಯಲ್ಲಿದ್ದು, ಟೂರ್ನಿಯ ಮತ್ತೊಂದು ಸೆಮಿ ಫೈನಲ್‌ನಲ್ಲಿ ಗಿಲ್ಲೆಸ್ ಸಿಮೊನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News