×
Ad

ಮೈಕಲ್ ಕ್ಲಾರ್ಕ್ ರ ಡ್ರೀಮ್ ಇಲೆವೆನ್ ಟೆಸ್ಟ್ ತಂಡದಲ್ಲಿ ಯಾರಿದ್ದಾರೆ ನೋಡಿ ?

Update: 2016-10-18 19:43 IST

ಸಿಡ್ನಿ, ಅ.18: ಆಸ್ಟ್ರೇಲಿಯದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಡ್ರೀಮ್ ಇಲೆವೆನ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದ ನಾಯಕನಾಗಿ ಶೇನ್ ವಾರ್ನ್ ಅವರನ್ನ ನೇಮಕ ಮಾಡಿದ್ದಾರೆ. ಆದರೆ, ಅಚ್ಚರಿಯೆಂಬಂತೆ ಆಸ್ಟ್ರೇಲಿಯದ ಬ್ಯಾಟಿಂಗ್ ದಂತಕತೆ ಕ್ಲಾರ್ಕ್ ಆಯ್ಕೆ ಮಾಡಿರುವ ತನ್ನ ಕನಸಿನ ತಂಡದಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಸ್ಥಾನ ನೀಡಿಲ್ಲ.

2015ರ ವಿಶ್ವಕಪ್ ವಿಜೇತ ತಂಡದ ನಾಯಕ ಕ್ಲಾರ್ಕ್ ಆಯ್ಕೆ ಮಾಡಿರುವ ತಂಡದಲ್ಲಿ ಇಂಗ್ಲೆಂಡ್ ತಂಡದ ಯಾವ ಆಟಗಾರನೂ ಇಲ್ಲ. ಆರಂಭಿಕ ಆಟಗಾರರಾಗಿ ತಮ್ಮದೇ ದೇಶದ ಮೈಕಲ್ ಸ್ಲಾಟರ್ ಹಾಗೂ ಮ್ಯಾಥ್ಯೂ ಹೇಡನ್‌ರನ್ನು ಆಯ್ಕೆ ಮಾಡಿದ್ದಾರೆ.

‘‘ನನ್ನ ಮೊದಲ ಕ್ರಿಕೆಟ್ ಹೀರೋ ಸ್ಲಾಟರ್. ಅವರ ಆಟದ ಶೈಲಿ ನನ್ನನ್ನು ಆಕರ್ಷಿಸಿತ್ತು. ನಾನು ಅವರೊಂದಿಗೆ ಇಂಟರ್‌ನ್ಯಾಶನಲ್ ಕ್ರಿಕೆಟ್ ಆಡಿಲ್ಲ. ಆದರೆ, ನ್ಯೂ ಸೌಥ್ ವೇಲ್ಸ್ ತಂಡದಲ್ಲಿ ಹಲವು ಬಾರಿ ಅವರೊಂದಿಗೆ ಫೀಲ್ಡಿಂಗ್ ಮಾಡುವ ಅವಕಾಶ ಲಭಿಸಿತ್ತು. ನಾನು ಆಸ್ಟ್ರೇಲಿಯ ತಂಡಕ್ಕೆ ಕಾಲಿಟ್ಟಾಗ ಮ್ಯಾಥ್ಯೂ ಹೇಡನ್ ಆರಂಭಿಕ ಆಟಗಾರನಾಗಿ ವಿಶ್ವದ ಎಲ್ಲ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿದ್ದರು ಎಂದು ಕ್ಲಾರ್ಕ್ ಹೇಳಿದ್ದಾರೆ.

ಕ್ಲಾರ್ಕ್‌ರ ಕನಸಿನ ತಂಡದಲ್ಲಿ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡುಲ್ಕರ್ ಅವರು ಕ್ರಮವಾಗಿ 3 ಹಾಗೂ 4ನೆ ಸ್ಥಾನದಲ್ಲಿದ್ದಾರೆ. ಕ್ಲಾರ್ಕ್ ತನ್ನ ಡ್ರೀಮ್ ಇಲೆವೆನ್‌ನಲ್ಲಿ ಆಸ್ಟ್ರೇಲಿಯದ 7, ಭಾರತದ ಒಂದು, ದಕ್ಷಿಣ ಆಫ್ರಿಕ ಎರಡು ಹಾಗೂ ವೆಸ್ಟ್‌ಇಂಡೀಸ್‌ನ ಓರ್ವ ಬ್ಯಾಟ್ಸ್‌ಮನ್‌ನ್ನು ಆಯ್ಕೆ ಮಾಡಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 12ನೆ ಆಟಗಾರನಾಗಿದ್ದಾರೆ. ಮೈಕಲ್ ಕ್ಲಾರ್ಕ್ ಡ್ರೀಮ್ ಟೆಸ್ಟ್ ಇಲೆವೆನ್
ಮೈಕಲ್ ಸ್ಲಾಟರ್(ಆಸ್ಟ್ರೇಲಿಯ), ಮ್ಯಾಥ್ಯೂ ಹೇಡನ್(ಆಸ್ಟ್ರೇಲಿಯ), ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ಸಚಿನ್ ತೆಂಡುಲ್ಕರ್(ಭಾರತ), ಬ್ರಿಯಾನ್ ಲಾರಾ(ವಿಂಡೀಸ್), ಜಾಕ್ ಕಲೀಸ್(ದ.ಆಫ್ರಿಕ), ಆ್ಯಡಮ್ ಗಿಲ್‌ಕ್ರಿಸ್ಟ್(ಆಸ್ಟ್ರೇಲಿಯ), ಮೈಕಲ್ ಜಾನ್ಸನ್(ಆಸ್ಟ್ರೇಲಿಯ), ಶೇನ್ ವಾರ್ನ್(ನಾಯಕ,ಆಸ್ಟ್ರೇಲಿಯ), ಡೇಲ್ ಸ್ಟೇಯ್ನ್(ದ.ಆಫ್ರಿಕ), ಗ್ಲೆನ್ ಮೆಕ್‌ಗ್ರಾತ್(ಆಸ್ಟ್ರೇಲಿಯ), ಮುರಳೀಧರನ್(ಶ್ರೀಲಂಕಾ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News