×
Ad

ಎವರೆಸ್ಟ್ ಏರಿದ ಮೊದಲ ಮಹಿಳೆ ಇನ್ನಿಲ್ಲ

Update: 2016-10-22 21:07 IST

ಟೋಕಿಯೊ, ಅ. 22: ವೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಮಹಿಳೆ ಜಪಾನ್‌ನ ಜಂಕೊ ತಾಬಿ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಅವರು ಉತ್ತರ ಟೋಕಿಯೊದ ಸೈಟಾಮದಲ್ಲಿರುವ ಆಸ್ಪತ್ರೆಯೊಂದರಲ್ಲಿ ಜಠರದ ಕ್ಯಾನ್ಸರ್‌ನಿಂದಾಗಿ ಗುರುವಾರ ಮೃತಪಟ್ಟರು ಎಂದು ಜಪಾನ್‌ನ ಸರಕಾರಿ ಟಿವಿ ಎನ್‌ಎಚ್‌ಕೆ ಮತ್ತು ಕ್ಯೋಡೊ ನ್ಯೂಸ್ ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅವರು 1975ರಲ್ಲಿ ವೌಂಟ್ ಎವರೆಸ್ಟ್ ಶಿಖರವನ್ನು ಆಗ್ನೇಯ ದಿಕ್ಕಿನಿಂದ ಏರಿದರು ಹಾಗೂ ಈ ಸಾಧನೆಗೈದ ಜಗತ್ತಿನ ಮೊದಲ ಮಹಿಳೆಯಾಗಿ ದಾಖಲಾದರು.

ಬಳಿಕ ಅವರು ಜಗತ್ತಿನ ಇತರ ಎತ್ತರದ ಶಿಖರಗಳನ್ನೂ ಏರಿದರು. ತಾಂಝಾನಿಯದ ಕಿಲಿಮಾಂಜರೊ, ಅಮೆರಿಕದ ವೌಂಟ್ ಮೆಕಿನ್ಲೆ ಮತ್ತು ಅಂಟಾರ್ಕ್ಟಿಕದ ವಿನ್ಸನ್ ಮಾಸಿಫ್- ಅವರು ಏರಿದ ಇತರ ಪ್ರಮುಖ ಶಿಖರಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News