‘ಅಹಂಕಾರಿ’ ಬಾಬ್ ಡೈಲಾನ್: ನೊಬೆಲ್ ಸಮಿತಿ ಸದಸ್ಯ
Update: 2016-10-22 21:59 IST
ಸ್ಟಾಕ್‌ಹೋಮ್ (ಸ್ವೀಡನ್), ಅ. 22: ಈ ಬಾರಿಯ ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದಿರುವ ಬಾಬ್ ಡೈಲಾನ್ ‘ಅಹಂಕಾರದ ಮನುಷ್ಯ’ ಎಂಬುದಾಗಿ ನೊಬೆಲ್ ಪ್ರಶಸ್ತಿ ಅಕಾಡಮಿಯ ಪ್ರಮುಖ ಸದಸ್ಯ ಹಾಗೂ ಸ್ವೀಡನ್ ಲೇಖಕ ಪೆರ್ ವಾಸ್ಟ್‌ಬರ್ಗ್ ಕಿಡಿಗಾರಿದ್ದಾರೆ.
ಕಳೆದ ವಾರ ಪ್ರಶಸ್ತಿ ಘೋಷಣೆ ಮಾಡಿದಂದಿನಿಂದ ಡೈಲಾನ್ ಸಂಪೂರ್ಣ ವೌನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಸ್ವೀಡಿಶ್ ಅಕಾಡೆಮಿ ಮಾಡಿರುವ ಫೋನ್ ಕರೆಗಳನ್ನು ಅಮೆರಿಕದ ಗೀತೆ ರಚನೆಕಾರ ಹಾಗೂ ಗಾಯಕ ಸ್ವೀಕರಿಸಿಲ್ಲ ಹಾಗೂ ಈ ಸುದ್ದಿಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.