ಎರಡು ದಶಕದ ಬಳಿಕ ಭಾರತದಲ್ಲಿ ಎಟಿಪಿ ಚಾಲೆಂಜರ್ಸ್ ಆಡಲಿರುವ ಪೇಸ್

Update: 2016-10-23 18:18 GMT

ಪುಣೆ, ಅ.23: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಸುಮಾರು 20 ವರ್ಷಗಳ ಬಳಿಕ ಭಾರತದಲ್ಲಿ ಎಟಿಪಿ ಚಾಲೆಂಜರ್ಸ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ನಾಳೆಯಿಂದ ಇಲ್ಲಿ ಆರಂಭವಾಗಲಿರುವ ಕೆಪಿಐಟಿ-ಎಂಎಸ್‌ಎಲ್‌ಟಿಎ ಚಾಲೆಂಜರ್ಸ್ ಟೂರ್ನಿಯಲ್ಲಿ ಪೇಸ್ ಯುವ ಆಟಗಾರ ರಾಮ್‌ಕುಮಾರ್ ರಾಮನಾಥನ್‌ರೊಂದಿಗೆ ಡಬಲ್ಸ್ ಪಂದ್ಯ ಆಡಲಿದ್ದಾರೆ. ಪೇಸ್‌ಗೆ 21ರ ಹರೆಯದ ರಾಮ್‌ಕುಮಾರ್ ಪುರುಷರ ಡಬಲ್ಸ್‌ನ 110ನೆ ಜೊತೆಗಾರನಾಗಿದ್ದಾರೆ.

ಸಾಕೇತ್ ಮೈನೇನಿ ಭಾರತದ ಸಿಂಗಲ್ಸ್ ಸವಾಲನ್ನು ಮುನ್ನಡೆಸಲಿದ್ದಾರೆ.

59ನೆ ರ್ಯಾಂಕಿನಲ್ಲಿರುವ ಪೇಸ್ ಈ ವರ್ಷ ಕೆಲವು ಚಾಲೆಂಜರ್ಸ್‌ ಟೂರ್ನಿಗಳಲ್ಲಿ ಆಡಲಿದ್ದಾರೆ. ತನ್ನ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳಲು ನಿರ್ಣಾಯಕ ಅಂಕ ಗಳಿಸಲು ಎದುರು ನೋಡುತ್ತಿದ್ದಾರೆ.

ಪೇಸ್ 1999ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಕೊನೆಯ ಬಾರಿ ಎಟಿಪಿ ಚಾಲೆೆಂಜರ್ಸ್‌ ಟೂರ್ನಿಯಲ್ಲಿ ಆಡಿದ್ದರು. ಆಗ ಪೇಸ್ ಅವರು ನಿತಿನ್ ಕಿರ್ತಾನೆ ಅವರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದರು.

ಈ ವರ್ಷ ಮಹೇಶ್ ಭೂಪತಿ ಕೂಡ ಡಬಲ್ಸ್ ಪಂದ್ಯ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News