×
Ad

ಕುಸ್ತಿ ಚಾಂಪಿಯನ್‌ಶಿಪ್: ಸಂದೀಪ್, ಬಜರಂಗ್, ರಿತುಗೆ ಚಿನ್ನ

Update: 2016-10-24 22:53 IST

ಹೊಸದಿಲ್ಲಿ, ಅ.24: ರಿಯೋ ಒಲಿಂಪಿಯನ್ ಸಂದೀಪ್ ಥೊಮರ್ ಹಾಗೂ ಅಮಿತ್ ಧನ್ಕರ್ ಇಲ್ಲಿ ನಡೆಯುತ್ತಿರುವ ಹಿರಿಯರ(ಪುರುಷರ ಹಾಗೂ ಮಹಿಳೆಯರ) ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.

ಉಕ್ರೇನ್‌ನ ಕಾಲೆ ಹಾಗೂ ಲಂಡನ್ ಒಲಿಂಪಿಯನ್ ಅಮಿತ್ ಕುಮಾರ್ ನಡುವೆ ನಡೆದ ಪುರುಷರ 57 ಕೆಜಿ ತೂಕ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಕಾಲೆ ಅವರು ಹಿರಿಯ ಕುಸ್ತಿಪಟು ಅಮಿತ್‌ರನ್ನು ಮಣಿಸಿ ಶಾಕ್ ನೀಡಿದರು. ಸಂದೀಪ್ ವಿರುದ್ಧ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು.

ಫೈನಲ್‌ನಲ್ಲಿ ಕಾಲೆಯನ್ನು ಮಣಿಸಿದ ಸಂದೀಪ್ ಚಿನ್ನದ ಪದಕವನ್ನು ಜಯಿಸಿದರು. ಕಾಲೆ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಮತ್ತೊಂದು ರೋಚಕ ಪಂದ್ಯದಲ್ಲಿ ಬಜರಂಗ್ 65ಕೆಜಿ ತೂಕ ವಿಭಾಗದಲ್ಲಿ ರಾಹುಲ್ ಮಾನ್‌ರನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು.

70 ಕೆಜಿ ತೂಕ ವಿಭಾಗದಲ್ಲಿ ಅಮಿತ್ ಧನ್ಕರ್ ಫೈನಲ್‌ನಲ್ಲಿ ವಿನೋದ್ ಕುಮಾರ್‌ರನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ರಿತು ಫೋಗತ್ ಫೈನಲ್‌ನಲ್ಲಿ ಪ್ರಿಯಾಂಕಾ ಸಿಂಗ್‌ರನ್ನು ಮಣಿಸಿ ಚಿನ್ನದ ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News