×
Ad

ಸ್ಪೇನ್ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2016-10-26 23:12 IST

ವೆಲೆನ್ಸಿಯ(ಸ್ಪೇನ್), ಅ.26: ಐದು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತೀಯ ಜೂನಿಯರ್ ಮಹಿಳಾ ತಂಡ ಆತಿಥೇಯ ಸ್ಪೇನ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ.

ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಸ್ಪೇನ್ ತಂಡ 15ನೆ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತ್ತು. 28ನೆ ನಿಮಿಷದಲ್ಲಿ ಜ್ಯೋತಿ ಬಾರಿಸಿದ ಗೋಲಿನ ನೆರವಿನಿಂದ ಭಾರತ ಸ್ಕೋರನ್ನು ಸಮಬಲಗೊಳಿಸಿತು. ಮೊದಲಾರ್ಧದಲ್ಲಿ ಪಂದ್ಯ 1-1ರಿಂದ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿ 42ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ರಿತೂ ಭಾರತಕ್ಕೆ 2-1 ರಿಂದ ಮುನ್ನಡೆ ಒದಗಿಸಿಕೊಟ್ಟರು. 44ನೆ ನಿಮಿಷದಲ್ಲಿ ಸ್ಫೆನ್‌ನ ಕ್ಲಾರಾ ಯಾರ್ಟ್ ಮತ್ತೊಂದು ಗೋಲು ಬಾರಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು.

ಅಂತಿಮ 10 ನಿಮಿಷಗಳಲ್ಲಿ ಪಂದ್ಯದ ಮತ್ತೆ ಹಿಡಿತ ಸಾಧಿಸಿರುವ ಭಾರತ 62ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿತು. ಸಂಗೀತಾಕುಮಾರಿ ಭಾರತಕ್ಕೆ 3-2 ಅಂತರದ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ 3 ಅಂಕ ಗಳಿಸಿತು.

ಭಾರತ ತಂಡ ಗುರುವಾರ ಜರ್ಮನಿ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News