×
Ad

ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ

Update: 2016-10-26 23:15 IST

 ದುಬೈ, ಅ.26: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ನಂ.1 ಸ್ಥಾನದಲ್ಲಿ ಮುಂದುವರಿದರೆ, ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಒಟ್ಟು 115 ಅಂಕ ಹೊಂದಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ(111) ಹಾಗೂ ಆಸ್ಟ್ರೇಲಿಯ(108) ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನದಲ್ಲಿವೆ.

ಇಂಗ್ಲೆಂಡ್ ನಾಲ್ಕನೆ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕ, ಶ್ರೀಲಂಕಾ, ನ್ಯೂಝಿಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ಹಾಗೂ ಝಿಂಬಾಬ್ವೆ ಆ ನಂತರದ ಸ್ಥಾನದಲ್ಲಿವೆ.

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದ ಆಫ್-ಸ್ಪಿನ್ನರ್ ಅಶ್ವಿನ್ 900 ಅಂಕ ದೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕದ ವೇಗಿ ಡೇಲ್ ಸ್ಟೇಯ್ನಿ(878) ಹಾಗೂ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್(861) ಅಗ್ರ-3ರಲ್ಲಿರುವ ಇನ್ನಿಬ್ಬರು ಬೌಲರ್‌ಗಳು.

ಅಶ್ವಿನ್ ಸ್ಪಿನ್ ಜೊತೆಗಾರ ರವೀಂದ್ರ ಜಡೇಜ 805 ಅಂಕದೊಂದಿಗೆ 7ನೆ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಒಟ್ಟು 451 ಅಂಕ ಗಳಿಸಿರುವ ಅಶ್ವಿನ್ ನಂ.1 ಸ್ಥಾನದಲ್ಲಿದ್ದಾರೆ.

ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಜಿಂಕ್ಯ ರಹಾನೆ ಅಗ್ರ ರ್ಯಾಂಕಿನಲ್ಲಿರುವ ಭಾರತದ ಆಟಗಾರ. ರಹಾನೆ 825 ಅಂಕ ಗಳಿಸಿ 6ನೆ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಕ್ರಮವಾಗಿ 15ನೆ ಹಾಗೂ 17ನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News