×
Ad

ಸಾನಿಯಾ-ಹಿಂಗಿಸ್ ಸೆಮಿ ಫೈನಲ್‌ಗೆ

Update: 2016-10-28 23:35 IST

ಸಿಂಗಾಪುರ, ಅ.28: ಭಾರತದ ಸಾನಿಯಾ ಮಿರ್ಝಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಡಬ್ಲುಟಿಎ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಡೋ-ಸ್ವಿಸ್ ಜೋಡಿ ತೈವಾನ್‌ನ ಹಾವೊ-ಚಿಂಗ್ ಚಾನ್ ಹಾಗೂ ಯಂಗ್ ಜಾನ್ ಚಾನ್‌ರನ್ನು 7-6(12-10), 7-5 ಸೆಟ್‌ಗಳ ಅಂತರದಿಂದ ಮಣಿಸಿತು.

ಸಾನಿಯಾ-ಹಿಂಗಿಸ್ ಮುಂದಿನ ಸುತ್ತಿನಲ್ಲಿ ಮತ್ತೊಂದು ಪಂದ್ಯದಲ್ಲಿ ಗೆಲುವು ಸಾಧಿಸಲಿರುವ ಅಗ್ರ ಶ್ರೇಯಾಂಕದ ಕ್ಯಾರೊಲಿನ್ ಗಾರ್ಸಿಯಾ-ಕ್ರಿಸ್ಟಿನಾ ಮ್ಲಾಡೆನೊವಿಕ್ ಅಥವಾ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್-ಲೂಸಿ ಸಫರೋವಾರನ್ನು ಎದುರಿಸಲಿದ್ದಾರೆ.

ಜುಲೈನಲ್ಲಿ ಮಾಂಟ್ರಿಯಲ್ ಮಾಸ್ಟರ್ಸ್‌ ಟೂರ್ನಿಯ ವೇಳೆ ಬೇರ್ಪಟ್ಟಿದ್ದ ಸಾನಿಯಾ-ಹಿಂಗಿಸ್ ಡಬ್ಲುಟಿಎ ಫೈನಲ್ಸ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಉದ್ದೇಶದಿಂದ ಮತ್ತೆ ಒಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News