ಶುಭಾಶಯ ಕೋರಿದ ಸೆಹ್ವಾಗ್ ರತ್ತ ಗೂಗ್ಲಿ ಎಸೆದ ಅಶ್ವಿನ್ ಅರ್ಧಾಂಗಿ!
ಹೊಸದಿಲ್ಲಿ, ಅ.29: ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಭಾರತ ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಈ ಪಂದ್ಯದಲ್ಲಿ ಅಶ್ವಿನ್ 59 ರನ್ನುಗಳಿಗೆ ಏಳು ವಿಕೆಟ್ ಪಡೆದು ಕಿವೀಸ್ ಬ್ಯಾಟಿಂಗ್ ಸರಣಿಯ ಪತನಕ್ಕೆ ಕಾರಣವಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವಿರೇಂದರ್ ಸೆಹ್ವಾಗ್ರವರು ಅಶ್ವಿನ್ ಅವರಿಗೆ ಹಾಸ್ಯಭರಿತ ಟ್ವೀಟ್ ಒಂದರ ಮುಖಾಂತರ ಕಂಗ್ರಾಜುಲೇಶನ್ಸ್ ಹೇಳಿದರು. ಅವರ ಟ್ವೀಟ್ ಹೀಗಿತ್ತು. ‘‘ಏಳನೇ ಬಾರಿ ಸರಣಿ ಶ್ರೇಷ್ಠರಾಗಿದ್ದಕ್ಕೆ ಕಂಗ್ರಾಟ್ಸ್ ಅಶ್ವಿನ್. ಮನೆಗೆ ಬೇಗನೇ ಹೋಗುವ ಅವಸರದ ಬಗ್ಗೆ ವಿವಾಹಿತ ಪುರುಷನೊಬ್ಬ ಮಾತ್ರ ಅರ್ಥೈಸಬಲ್ಲ ಫ್ಯಾಮಿಲಿ ಟೈಮ್.’’
ಅಶ್ವಿನ್ ಅವರು ಸೆಹ್ವಾಗ್ ಟ್ವೀಟಿಗೆ ಧನ್ಯವಾದ ಹೇಳಿದರು. ಆದರೆ ಈ ಕಥೆಗೆ ಟ್ವಿಸ್ಟ್ ಸಿಕ್ಕಿದ್ದೇ ಅಶ್ವಿನ್ ಅವರ ಅರ್ಧಾಂಗಿಯ ಟ್ವೀಟ್ ನಿಂದ. ‘‘ ಹ್ಹ ಹ್ಹ ಹ್ಹಾ ನಾನು ಹೆಚ್ಚೇನೂ ಮಾಡಿರಲಿಲ್ಲ’’ ಎಂದು ಪ್ರೀತಿ ಅಶ್ವಿನ್ ಟ್ವೀಟ್ ಮಾಡಿದ್ದರು. ಇದನ್ನು ನೋಡಿದ್ದೇ ತಡ ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಕೂಡ ‘‘ನಾನು ಕೂಡ ಏನೂ ಮಾಡಿಲ್ಲ. ಇಬ್ಬರೂ ಯಾವತ್ತಿನ ಹಾಗೆ ಅವಸರದಲ್ಲಿದ್ದರು’’ ಎಂದು ಟ್ವೀಟ್ ಮಾಡಿದರು.
ಅಂತಿಮವಾಗಿ ಈ ಹಾಸ್ಯಭರಿತ ಟ್ವೀಟುಗಳೆಲ್ಲಾ ಜತೆ ಸೇರಿ ಟ್ರೆಂಡಿಂಗ್ ‘ಫ್ಯಾಮಿಲಿ ಟೈಮ್’ ಆಗಿತ್ತು.