×
Ad

ನ್ಯೂಜಿಲೆಂಡ್ ವಿರುದ್ಧದ ಪಂದ್ಯ: ತಾಯಂದಿರ ಹೆಸರಿರುವ ಜೆರ್ಸಿ ಧರಿಸಿದ ಭಾರತೀಯ ಕ್ರಿಕೆಟಿಗರು

Update: 2016-10-29 16:41 IST

ವಿಶಾಖಪಟ್ಣಂ,ಅ. 29 : ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇಂದು ವಿಶಾಖಪಟ್ಣಂನಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಏಕ ದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದು ವಿಶೇಷವಿದೆ. ಇಲ್ಲಿ ಆಡುವ ಎಲ್ಲಾ ಭಾರತೀಯ ಕ್ರಿಕೆಟಿಗರು ಧರಿಸುವ ಜರ್ಸಿಯ ಹಿಂದೆ ಅವರವರ ತಾಯಂದಿರ ಹೆಸರುಗಳನ್ನು ಪ್ರಿಂಟ್ ಮಾಡಲಾಗಿದೆ. ತಂದೆಯಂದಿರಿಗೆ ನೀಡುವ ಮಹತ್ವವನ್ನು ತಾಯಂದಿರಿಗೆ ನೀಡದೇ ಇರುವುದರಿಂದ ಅವರಿಗೂ ಧನ್ಯವಾದ ಸಮರ್ಪಿಸುವ ವಿನೂತನ ಕಾರ್ಯ ಇದಾಗಿದೆ.

ಪಂದ್ಯದ ಟಾಸ್ ವೇಳೆಗೆ ರವಿ ಶಾಸ್ತ್ರಿಯವರು ಭಾರತೀಯ ತಂಡದ ಕ್ಯಾಪ್ಟನ್ ಧೋನಿ ಬಳಿ ತಾಯಿಯ ಹೆಸರಿರುವ ಜರ್ಸಿಯ ಬಗ್ಗೆ ಕೇಳಿದಾಗ ‘‘ತಾಯಿಯ ಕೊಡುಗೆ ಸೈನಿಕರ ಕೊಡುಗೆಯಷ್ಟೇ ಮಹತ್ವದ್ದು’’ ಎಂದಿದ್ದಾರೆ.

‘‘ನಾವೆಲ್ಲರೂ ನಮ್ಮ ತಂದೆಯ ಉಪನಾಮೆ ಹೊಂದಿದ್ದೇವೆ ಆದರೆನಮ್ಮ ತಾಯಂದಿರು ನಮ್ಮನ್ನು ಬೆಳೆಸುವ ಸಲುವಾಗಿ ಮಾಡಿರುವ ತ್ಯಾಗಕ್ಕೂ ಗೌರವ ಸಲ್ಲಿಸಬೇಕಾಗಿದೆ. ಇಡೀ ಭಾರತ ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ತಾಯಂದಿರನ್ನು ಯಾವತ್ತೂ ಗೌರವಿಸಬೇಕು,’’ ಎಂದು ಧೋನಿ ಹೇಳಿದರು.

ಈ ಹಿಂದೆ ಭಾರತೀಯ ಕ್ರಿಕೆಟ್ ತಂಡದ ಪ್ರವರ್ತಕರಾದ ಸ್ಟಾರ್ ಇಂಡಿಯಾ ‘ನಯೀ ಸೋಚ್’ ಎಂಬ ಟಿವಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಅದರಲ್ಲಿ ಮೂವರು ಪ್ರಮುಖ ಕ್ರಿಕೆಟರುಗಳಾದ ಧೋನಿ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆತಮ್ಮ ಹೆಸರಿನ ಜರ್ಸಿಯ ಬದಲು ತಮ್ಮ ತಾಯಂದಿರ ಹೆಸರಿರುವ ಜರ್ಸಿಗಳನ್ನು ಹೆಮ್ಮೆಯಿಂದ ಧರಿಸಿದ್ದನ್ನು ತೋರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News