×
Ad

ಕೃತಕ ಕಾಲು ಕಳಚಿಹೋದರೂ ಫೀಲ್ಡಿಂಗ್ ಮುಂದುವರಿಸಿದ ಇಂಗ್ಲೆಂಡ್ ಆಟಗಾರ!

Update: 2016-10-31 21:17 IST

ಲಂಡನ್,ಅ.31: ಇಂಗ್ಲೆಂಡ್‌ನ ವಿಕಲಚೇತನ ಕ್ರಿಕೆಟ್ ಪಟು ಲಿಯಾಮ್ ಥಾಮಸ್ ಕ್ಷೇತ್ರರಕ್ಷಣೆಯ ವೇಳೆ ವೀರೋಚಿತ ಪ್ರಯತ್ನದ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

 ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ವಿಕಲಚೇತನ ಆಟಗಾರರ ನಡುವಿನ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ತಡೆಯಲು ಓಡಿದ ಇಂಗ್ಲೆಂಡ್‌ನ ಲಿಯಾಮ್ ಥಾಮಸ್‌ರ ಕೃತಕ ಕಾಲು ಕಳಚಿಬಿತ್ತು. ಆದರೆ, ತನ್ನ ಕರ್ತವ್ಯವನ್ನು ಮರೆಯದ ಥಾಮಸ್ ಒಂಟಿಕಾಲಿನಲ್ಲಿ ಓಡಿ ಚೆಂಡನ್ನು ತಡೆದು ವಾಪಸ್ ನೀಡಿದರು. ಬಳಿಕ ಉದುರಿ ಹೋಗಿದ್ದ ಕೃತಕ ಕಾಲನ್ನು ಜೋಡಿಸಿಕೊಂಡರು. ಥಾಮಸ್‌ರ ಪ್ರಯತ್ನ ಎಲ್ಲರ ಶ್ಲಾಘನೆಗೆ ಒಳಗಾಗಿದೆ. ‘‘ಚೆಂಡನ್ನು ತಡೆದು ಫೀಲ್ಡರ್‌ಗೆ ನೀಡಬೇಕೇ? ಅಥವಾ ಕಳಚಿಹೋದ ಕೃತಕ ಕಾಲನ್ನು ಹೆಕ್ಕಿಕೊಳ್ಳಬೇಕೇ? ಎಂಬ ಬಗ್ಗೆ ನನಗೆ ಗೊಂದಲ ಉಂಟಾಗಿತ್ತು. ಕೊನಗೆ ಚೆಂಡನ್ನು ತಡೆದು ಫೀಲ್ಡರ್‌ಗೆ ನೀಡಲು ನಿರ್ಧರಿಸಿದ್ದೆ’’ ಎಂದು ಥಾಮಸ್ ಹೇಳಿದ್ದಾರೆ.

 ‘‘ನಮ್ಮಲ್ಲಿ ಅಂಗವಿಕಲತೆ ಇದ್ದರೆ, ಅದರಲ್ಲಿರುವ ತಮಾಷೆಯ ವಿಷಯವನ್ನು ಗಮನಿಸಬೇಕು. ನಮ್ಮಲ್ಲೇ ಸಹಕಾರದ ಮನೋಭಾವವಿರಬೇಕು. ಇಂತಹ ಘಟನೆ ನಡೆದಾಗ ಪರಸ್ಪರ ದುಃಖವನ್ನು ಹಂಚಿಕೊಳ್ಳಬೇಕು’’ ಎಂದು ಥಾಮಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News