ಎನ್‌ಬಿಎ ಡಿ-ಲೀಗ್ ಡ್ರಾಫ್ಟ್‌ಗೆ ಪಲ್‌ಪ್ರೀತ್ ಸಿಂಗ್ ಆಯ್ಕೆ

Update: 2016-10-31 18:09 GMT

ಮುಂಬೈ, ಅ31: ನ್ಯೂಯಾರ್ಕ್‌ನಲ್ಲಿ ನಡೆದ ಎನ್‌ಬಿಎ ಡಿ-ಲೀಗ್ ಡ್ರಾಫ್ಟ್‌ಗೆ ಭಾರತದ ಮೊದಲ ನ್ಯಾಶನಲ್ ಬಾಸ್ಕಟ್‌ಬಾಲ್ ಪ್ರತಿಭಾಶೋಧ ಕಾರ್ಯಕ್ರಮದ ವಿಜೇತ ಪಲ್‌ಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ.

21ರ ಹರೆಯದ ಸಿಂಗ್ ಎನ್‌ಬಿಎ ಬ್ರೂಕ್ಲಿನ್ ನೆಟ್ಸ್‌ನ ಮಾನ್ಯತೆಯಿರುವ ತಂಡ ಲಾಂಗ್ ಐಲ್ಯಾಂಡ್ ನೆಟ್ಸ್‌ಗೆ ಸೇರ್ಪಡೆಯಾಗಿದ್ದಾರೆ.

ನ್ಯೂಯಾರ್ಕ್‌ನ ಅಥ್ಲೆಟಿಕ್ ಕ್ಲಬ್‌ನಲ್ಲಿ ತರಬೇತಿ ನಿರತರಾಗಿರುವ ಆರು ಅಡಿ 9 ಇಂಚು ಎತ್ತರದ ಸಿಂಗ್, ತನಗೆ ಡಿ ಲೀಗ್ ತಂಡದಲ್ಲಿ ಸೇರ್ಪಡೆಯಾಗುವ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.

ನಾನು ಹಾಕಿರುವ ಪ್ರಯತ್ನಕ್ಕೆ ನನಗೆ ಸಂತೋಷವಿದೆ. ಲಾಂಗ್ ಐಲ್ಯಾಂಡ್ ನೆಟ್ಸ್ ತಂಡದಲ್ಲೂ ಇದೇ ಪ್ರಯತ್ನವನ್ನು ಮುಂದುವರಿಸುವತ್ತ ಕಠಿಣ ಶ್ರಮವಹಿಸುವೆ ಎಂದು ಸಿಂಗ್ ಹೇಳಿದರು.

ಫೆಬ್ರವರಿಯಲ್ಲಿ 2016ರ ಎಸಿಜಿ ಎನ್‌ಬಿಎ ಜಂಪ್ ಪ್ರೊಗ್ರಾಂ ಹಾಗೂ ಆಗಸ್ಟ್ 14ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ 2016ರ ಎನ್‌ಬಿಎ-ಡಿ ಲೀಗ್ ನ್ಯಾಶನಲ್ ಟ್ರೈಔಟ್ಸ್‌ನಲ್ಲಿ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದರು.

ಭಾರತದಲ್ಲಿ ನಡೆದ ಎನ್‌ಬಿಎ ಪ್ರತಿಭಾನ್ವೇಷಣೆಯಲ್ಲಿ ಲಭಿಸಿದ ಪ್ರತಿಭೆ ಪಲ್‌ಪ್ರೀತ್ ಸಿಂಗ್. 16ನೆ ಆವೃತ್ತಿಯ ಎನ್‌ಬಿಎ ಡಿ ಲೀಗ್ ನ.11 ರಿಂದ ಆರಂಭವಾಗಲಿದ್ದು,ಇದರಲ್ಲಿ 22 ತಂಡಗಳು ಭಾಗವಹಿಸಲಿವೆ. ಅಕ್ಟೋಬರ್ 31ರಿಂದ ತರಬೇತಿ ಶಿಬಿರಗಳು ಆರಂಭವಾಗಿದ್ದು, ನ.10ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News